ವಿಜ್ಞಾನ ಬರಹಗಾರರ ತರಬೇತಿ
ರಾಯಚೂರು: ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಹಯೋಗದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ರಾಜ್ಯದ ಉದಯೋನ್ಮುಖ ಕನ್ನಡ ಭಾಷೆಯ ವಿಜ್ಞಾನ ಕುರಿತ ಬರೆಹಗಾರರಿಗೆ ಕಾರ್ಯ ನಿರತ ವಿಜ್ಞಾನ ಪತ್ರಿಕೋದ್ಯಮಿಗಳಿಗೆ, ವರದಿಗಾರರಿಗೆ ಜನಪ್ರಿಯ ವಿಜ್ಞಾನ ಬರೆವಣಿಗೆಯ ತರಬೇತಿ ಶಿಬಿರ ಏಪ್ರಿಲ್ ಮೊದಲ ವಾರದಲ್ಲಿ ಆಯೋಜಿಸಲಾಗುತ್ತಿದೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಆವರಣದಲ್ಲಿ ನಡೆಯುವ ಶಿಬಿರದಲ್ಲಿ ಭಾಗವಹಿಸಲಿಚ್ಚಿಸುವರು ವಿಜ್ಞಾನ ಸಂವಹನದಲ್ಲಿ ವಿಶೇಷ ಆಸಕ್ತಿ ಹೊಂದಿರಬೇಕು. ಗ್ರಾಮೀಣ ವಿಭಾಗದವರು ಸಹ ಶಿಬಿರದಲ್ಲಿ ಭಾಗವಹಿಸಬಹುದು.
ಸ್ವವಿವರಗಳು, ಭಾವಚಿತ್ರ ಹಾಗೂ ಒಂದು ಸ್ವರಚಿತ ಲೇಖನವನ್ನು ಅರ್ಜಿಯ ಜತೆಗೆ ಗೌರವ ಕಾರ್ಯದರ್ಶಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಭವನ, ನಂ.24 ಬಾರ್ 2, 21ನೇ ಮುಖ್ಯ ರಸ್ತೆ 2ನೇ ಹಂತ, ಬನಶಂಕರಿ, ಬೆಂಗಳೂರು ಇಲ್ಲಿಗೆ ಕಳಿಸಲು ಕೋರಲಾಗಿದೆ.