ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಶ್ರೇಷ್ಠ ಲೇಖಕ ಪ್ರಶಸ್ತಿಗೆ ಆಯ್ಕೆ

Lingaraj Badiger
Updated On : 16 Mar 2013, 10:53 am

ರಾಯಚೂರು: ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿನ ಆರು ಕೃತಿಗಳನ್ನು 2012-13ನೇ ಸಾಲಿನ ಶ್ರೇಷ್ಠ ಲೇಖಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಬೆಂಗಳೂರು ಇವರಿಂದ ಶ್ರೇಷ್ಠ ಲೇಖಕ ಪ್ರಶಸ್ತಿಗೆ ಅರ್ಜಿ ಅಹ್ವಾನಿಸಲಾಗಿತ್ತು. ಒಟ್ಟು 56 ಪುಸ್ತಕಗಳು ಅಕಾಡೆಮಿಗೆ ಸಲ್ಲಿಕೆಯಾಗಿದ್ದವು. ತಜ್ಞರ ಸಮಿತಿಯು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿ ಟಿ.ಆರ್. ಅನಂತರಾಮು ಅವರ ದೈತ್ಯ ಪ್ರತಿಭೆಗಳ ಹೆಗಲ ಮೇಲೆ, ಎ. ಚಂದ್ರಶೇಖರ, ಮುಳಿಯ ರಾಘವಯ್ಯ ಮತ್ತು ಡಿ.ವಿ. ಗೋಪಿನಾಥ ಅವರು ಬರೆದ ವಿಕಿರಣ ಪರಿಣಾಮ ಪರಮಾಣುಶಕ್ತಿ ಮತ್ತು ತುಲನಾತ್ಮಕ ವಿಪತ್ತುಗಳು ಹಾಗೂ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಬೇಳೂರು ಸುದರ್ಶನ್ ಬರೆದ ಉರಿಯ ಸಿರಿ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿ ಡಾ. ನಾ. ಸೋಮೇಶ್ವರ ಬರೆದ ಜ್ಞಾನೇಂದ್ರಿಯಗಳು ಮತ್ತು ಡಾ ಸಿ.ಜಿ. ಕೇಶವಮೂರ್ತಿ ಅವರು ಬರೆದ ಮುಪ್ಪಿನಲ್ಲಿ ಕಾಡುವ ಸಮಸ್ಯೆಗಳು ಎಂಬ ಕೃತಿಗಳು ಪ್ರಶಸ್ತಿಗೆ ಆಯ್ಕೆಯಾಗಿವೆ ಎಂದು ಅಕಾಡೆಮಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement