ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಂತ್ರಾಲಯ: ಶ್ರೀಮನ್ನ್ಯಾಯ ಸುಧಾ ಮಂಗಳ, ನವರತ್ನ ರಥೋತ್ಸವ

Rashmi Kasaragodu
Updated On : 16 Mar 2013, 9:19 am

ರಾಯಚೂರು: ಮಂತ್ರಾಲಯದ ರಾಯರ ಮಠದಲ್ಲಿ ಶನಿವಾರ ಶ್ರೀಮನ್ನ್ಯಾಯ ಸುಧಾ ಮಂಗಳ ಮಹೋತ್ಸವದ ಅಂಗವಾಗಿ ಶ್ರೀಮೂಲ ರಘುಪತಿ ಶ್ರೀವೇದವ್ಯಾಸ ದೇವರ ನವರತ್ನ ಖಚಿತ ಸ್ವರ್ಣ ರಥೋತ್ಸವ ನಡೆಯಿತು.
ಮಠದಲ್ಲಿ ಬೆಳಗ್ಗೆ ರಾಘವೇಂದ್ರಸ್ವಾಮಿಗಳ ಮೂಲ ಬೃಂದಾವನಕ್ಕೆ ವಿಶೇಷ ಅಭಿಷೇಕ ಪೂಜೆ ಅಲಂಕರಿಸಲಾಗಿತ್ತು. ಶ್ರೀಸುಯತೀಂದ್ರತೀರ್ಥರು ಶ್ರೀಮೂಲ ರಾಮದೇವರ ಪೂಜೆ ನೆರವೇರಿಸಿದರು. ಈ ನಂತರ ಶ್ರೀಮನ್ನ್ಯಾಯ ಸುಧಾ ಮಂಗಳ ಮಹೋತ್ಸವದ ಅಂಗವಾಗಿ ಮೂಲ ರಘುಪತಿ ಶ್ರೀವೇದವ್ಯಾಸ ದೇವರ ಪೆಟ್ಟಿಗೆ ಇರಿಸಿ ನವರತ್ನ ಖಚಿತ ಸ್ವರ್ಣ ರಥೋತ್ಸವ ಮಠದ ಪ್ರಾಕಾರದಲ್ಲಿ ನೆರವೇರಿಸಲಾಯಿತು.
ಇದರಲ್ಲಿ ಸುಯತೀಂದ್ರತೀರ್ಥರು, ಪೇಜಾವರ ಮಠದ ವಿಶ್ವೇಶತೀರ್ಥರು, ವಿಶ್ವ ಪ್ರಸನ್ನ ತೀರ್ಥರು ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಪಾಲ್ಗೊಂಡಿದ್ದರು. ಸಾವಿರಾರು ಸಂಖ್ಯೆಯ ಭಕ್ತರೂ ರಥೋತ್ಸವದಲ್ಲಿ ಪಾಲ್ಗೊಂಡರು.
ಈ ನಂತರದಲ್ಲಿ ಯಾಗ ಮಂಟಪದಲ್ಲಿ ಶ್ರೀಮನ್ನ್ಯಾಯ ಸುಧಾ ಮಂಗಳ ಮಹೋತ್ಸವ ಸಮಾರಂಭದ ಸಂವಾದ ಕಾರ್ಯಕ್ರಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement