ಮಹಿಳಾ ಐಟಿಐ ಕೇಂದ್ರ
ಕ.ಪ್ರ. ವಾರ್ತೆ, ಬೀದರ್, ಮಾ.16
ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಮಹಿಳಾ ಐಟಿಐ ಪ್ರಾರಂಭಿಸಲು ಧನಾತ್ಮಕ ಚಿಂತನೆ ನಡೆದಿದ್ದು, ಶೀಘ್ರವೇ ಇದು ಕಾರ್ಯಾನುಷ್ಠಾನಗೊಳ್ಳಲಿದೆ ಎಂದು ಶಾಸಕ ರಹೀಮ್ ಖಾನ್ ತಿಳಿಸಿದರು.
ಇಲ್ಲಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಸಿಓಇ ಕಟ್ಟಡ ಹಾಗೂ ಸಿಟಿಎಸ್ ಕಾರ್ಯಾಗಾರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸ್ವಾವಲಂಬಿ ಜೀವನಕ್ಕೆ ಕಾಲಿಡಲು ಐಟಿಐ ತರಬೇತಿಯು ಪರಿಪೂರ್ಣ ವಾತಾವರಣ ಕಲ್ಪಿಸುತ್ತದೆ. ಇದೇ ಸರ್ಕಾರಿ ಐಟಿಐ ಕ್ಯಾಂಪಸ್ನಲ್ಲಿ ಮಹಿಳಾ ಐಟಿಐ ಕೇಂದ್ರ ಸ್ಥಾಪನೆಯಾಗುವ ಮುನ್ಸೂಚನೆಗಳಿವೆ ಎಂದರು.
ಯಶಸ್ಸು: ಸತ್ಯವಂತರಾಗಿ ಕುಶಲಕರ್ಮಿಗಳು ದಾಪುಗಾಲು ಹಾಕಿ ಬಡತನದ ಬೇಗೆಯಿಂದ ಹೊರಬಂದು ಕೈಗಾರಿಕೆಗಳಲ್ಲಿ ದುಡಿಯುತ್ತಿರುವುದು ಮನಗಂಡಿದ್ದೇನೆ. ಒಟ್ಟಾರೆ ಪ್ರಾಯೋಗಿಕ ಕೌಶಲ್ಯ ಕೈಗಾರಿಕಗಳ ಅಭಿವೃದ್ಧಿಯ ಸಂಕೇತ ಹಾಗೆಯೇ ಮಕ್ಕಳು ತಮ್ಮ ಸಂಸಾರದ ಪರಿಸರವನ್ನು ಮೆಲುಕು ಹಾಕುತ್ತ ನಿಜ ದಿಕ್ಕಿನಲ್ಲಿ ನಡೆದರೆ ಯಶಸ್ಸು ತನ್ನಿಂದತಾನೆ ಬೆನ್ನಟ್ಟಿ ಬರುತ್ತದೆ ಎಂದರು.
ಸಿಟಿಎಸ್ ಕಟ್ಟಡ ಉದ್ಘಾಟಿಸಿದ ಜಿಪಂ ಅಧ್ಯಕ್ಷೆ ದೀಪಿಕಾ ರಾಠೋಡ್ ಮಾತನಾಡಿ, ಪ್ರಾಥಮಿಕ ಸೌಲಭ್ಯಗಳಿಗಾಗಿ ನಿರ್ಮಾಣಗೊಂಡ ಬಿಆರ್ಜಿಎಫ್ ಕಟ್ಟಡ ಗುಣಾತ್ಮಕವಾಗಿದೆ. ಇದು ಜಿಲ್ಲೆಯ ಮಕ್ಕಳಿಗೆ ಅನುಕೂಲಕರವಾಗಿದ್ದು ಐಟಿಐ ಶಿಕ್ಷಣ ಕಲಿಕೆ ಉತ್ತಮವಾಗಿದ್ದು, ಹಲವಾರು ಕುಟುಂಬಗಳು ಕಿತ್ತು ತಿನ್ನುತ್ತಿರುವ ಬಡತನದಿಂದ ಹೊರಬಂದಿವೆ ಎಂದರು.
ಜಿಪಂ ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಕೌಶಲ್ಯ ಅಭಿವೃದ್ಧಿಗಾಗಿ 3 ಫೇಸ್ ವಿದ್ಯುತ್ ಸಂಪರ್ಕಕ್ಕಾಗಿ ಅನುದಾನ ಮೀಸಲಿಡಲಾಗುವುದೆಂದು ಭರವಸೆ ನೀಡಿದರು.
ಜಿಪಂ ಸದಸ್ಯ ಕುಶಾಲರಾವ್ ಪಾಟೀಲ ಗಾದಗಿ ಹಾಗೂ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿದರು. ಇಲಾಖೆಯ ಬಸವಕಲ್ಯಾಣ ಪ್ರಾಚಾರ್ಯರಾದ ಸೈಯದ್ ಹಮೀದ್ ಅಲಿ, ಹುಮನಾಬಾದ್ ಪ್ರಾಚಾರ್ಯರಾದ ಲಿಂಗಣ್ಣ, ಔರಾದ್ನ ಲಕ್ಷ್ಮಿಕಾಂತ ಶಂಕರರಾವ್, ಜೇವರ್ಗಿ ಪ್ರಾಚಾರ್ಯ ಶರಣಬಸಪ್ಪ, ನೌಕರರ ಸಂಘದ ಅಧ್ಯಕ್ಷ ಬಸವರಾಜ ಭರಶೆಟ್ಟಿ, ಗೌರವಾಧ್ಯಕ್ಷ ಬಿ.ಎನ್. ಸ್ವಾಮಿ ಹಾಗೂ ಇಲಾಖೆಯ ಉಪ ನಿರ್ದೇಶಕ ವೈಜಗೊಂಡ ಇದ್ದರು.
ಸನ್ಮಾನ: ಇದೇ ಸಂದರ್ಭದಲ್ಲಿ ಸಂಸ್ಥೆಯ ಅಭಿವೃದ್ಧಿಯತ್ತ ಸಾಗಲು ಕಾರಣೀಕರ್ತರಾದ ಪ್ರಾಚಾರ್ಯ ಶಿವಶಂಕರ ಟೋಕರೆ ಅವರಿಗೆ ಕೌಶಲ್ಯಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕಳೆದ ಸಾಲಿನಲ್ಲಿ ವಿದ್ಯುತ್ ಕರ್ಮಿ ವಿಭಾಗದಲ್ಲಿ ಶೇ.90ರಷ್ಟು ಅಂಕ ಪಡೆದ ರವಿಪ್ರಕಾಶ್ ಹಾಗೂ ಲಿಂಗರಾಜ್ ಮಡೆಪ್ಪ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಗುಣಾತ್ಮಕ ತರಬೇತಿ ನೀಡುವಲ್ಲಿ ಸಫಲರಾದ ಜಗನ್ನಾಥ, ರೇಣುಕಾ ರಾಠೋಡ, ವಿನಾಯಕ ಗುರ್ಲಾ, ಶಿವಪುತ್ರಪ್ಪ ನಿಂಬೂರು, ಪ್ರಶಾಂತ ಜಾಂತಿಕರ್ ಹಾಗೂ ಕಿರಿಯ ತರಬೇತಿ ಅಧಿಕಾರಿ ಬಾಬು ಪ್ರಭಾಜಿ ಹಾಗೂ ಯೂಸುಫ್ಮಿಯ್ಯಾ ಜೋಜನಾಕರ್ ಮತ್ತು ನಿವೃತ್ತಿಯಾಗಲಿರುವ ನರಸಿಂಗ್ ಗುರ್ಲಾ, ಶರಣಪ್ಪ ಪಾಟೀಲ್ ಕರಿಬಸಪ್ಪ, ಕಲ್ಲಪ್ಪ ಮಾಶೆಟ್ಟಿ ಹಾಗೂ ಔರಾದ್ನ ಪರಿಶ್ರಮವಾದಿ ಅಧೀಕ್ಷ ಪ್ರಕಾಶರನ್ನು ಸನ್ಮಾನಿಸಲಾಯಿತು. ಬಾಬು ರಾಜೋಳಕರ್ ಸ್ವಾಗಿತಿಸಿ ಬಾಬು ಪ್ರಭಾಜಿ ನಿರೂಪಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.