ಶೀಘ್ರವೇ ಚುನಾವಣಾಧಿಕಾರಿ ವಿರುದ್ಧ ದೂರು: ವಿರೂಪಾಕ್ಷಪ್ಪ
ಸಿಂಧನೂರು: ನಗರಸಭೆ ಚುನಾವಣೆಯಲ್ಲಿ ಚುನಾವಣಾಧಿಕಾರಿಗಳು ಕಾಂಗ್ರೆಸ್‌ನ ಏಜೆಂಟರಂತೆ ಕೆಲಸ ಮಾಡಿ, ನಕಲಿ ಮತದಾರರ ಯಾದಿಯನ್ನು ತಯಾರಿಸಿಕೊಟ್ಟಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ. ಚುನಾವಣಾ ಅಧಿಕಾರಿಗಳ ವಿರುದ್ಧ ರಾಜ್ಯ ಚುನಾವಣಾ ಆಯೋಗ ಹಾಗೂ ಜಿಲ್ಲಾಧಿಕಾರಿಗಳಿಗೆ ಶೀಘ್ರವೇ ದೂರು ಸಲ್ಲಿಸಲಾಗುವುದು ಎಂದು ಮಾಜಿ ಸಂಸದ, ಬಿಎಸ್ಸಾರ್ ಕೋರ್ ಕಮಿಟಿ ಸದಸ್ಯ ವಿರೂಪಾಕ್ಷಪ್ಪ ಗಂಭೀರ ಆರೋಪ ಮಾಡಿದರು.
ನಗರದಲ್ಲಿನ ಬಿಎಸ್ಸಾರ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಕಾರಣಗಳನ್ನು ಹುಡುಕುವ ಆತ್ಮಾವಲೋಕನ ಸಭೆಯನ್ನುದ್ದೇಶಿಸಿ ಮಾತನಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನಗರದ 25 ವಾರ್ಡ್‌ಗಳಲ್ಲಿ ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿನ ಕುರಿತು ಅಭ್ಯರ್ಥಿಗಳೊಂದಿಗೆ ಮುಕ್ತ ಚರ್ಚೆ ನಡೆಸಲಾಯಿತು. ಆಗ ಬಹುತೇಕ ಅಭ್ಯರ್ಥಿಗಳು ಕಾಂಗ್ರೆಸ್‌ನವರ ಕುತಂತ್ರದಿಂದಾಗಿ ತಮ್ಮ ಪಕ್ಷಕ್ಕೆ ಸೋಲುಂಟಾಗಿದೆ. ಪ್ರತಿ ವಾರ್ಡಿನಲ್ಲಿ ಕಾಂಗ್ರೆಸ್‌ನವರು ಗ್ರಾಮೀಣ ಭಾಗದ ನಕಲಿ ಮತದಾರರನ್ನು ಸೇರಿಸಿದ್ದಾರೆ. ಗುಂಜಳ್ಳಿ, ವಿರುಪಾಪುರ, ಬಸಾಪುರ, ಮುದುಗಲ್, ಸುಲ್ತಾನಪುರ, ಜವಳಗೇರಾ, ಜಂಗಮರಟ್ಟಿ, ಸಾಲಗುಂದಾ ಮತ್ತಿತರರ ಗ್ರಾಮಗಳ ಮತದಾರರನ್ನು ನಗರ ಪ್ರದೇಶದ ವ್ಯಾಪ್ತಿಯಲ್ಲಿ ಸೇರಿಸಿದ ಕೀರ್ತಿ ಕಾಂಗ್ರೆಸ್ ಮುಖಂಡರದ್ದಾಗಿದೆ. ಸುಮಾರು 8ರಿಂದ 10 ಸಾವಿರ ಖೊಟ್ಟಿ ಮತದಾರರು ಮತ ಚಲಾವಣೆ ಮಾಡಿದ್ದರಿಂದ ಕಾಂಗ್ರೆಸ್‌ನವರು ಗೆದ್ದಿದ್ದಾರೆ ಎಂದು ವಿಶ್ಲೇಷಿಸಿದರು.
ಪಕ್ಷದೆಡೆಗೆ ಗ್ರಾಮೀಣರ ಒಲವು: ನಗರಸಭೆ ಚುನಾವಣೆಗಳು ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಲ್ಲ. ಗ್ರಾಮೀಣ ಪ್ರದೇಶದ ಮತದಾರರು ಬಿಎಸ್ಸಾರ್ ಕಡೆ ಒಲವು ತೋರಿದ್ದಾರೆ. ಪಕ್ಷದ ಸಂಸ್ಥಾಪಕ ಶ್ರೀರಾಮುಲು ಅವರ ಎಸ್‌ಸಿ, ಎಸ್‌ಟಿ ಸಮಾವೇಶ ಮುಂಬರುವ ಚುನಾವಣೆಗೆ ಪ್ರಭಾವ ಬೀರಲಿದೆ ಎಂ ದರು. ಕೆ.ಕರಿಯಪ್ಪ, ಎಸ್.ಎಂ.ಎಚ್. ಮಿಟ್ಟಿಮನಿ, ಮೊಹಿನುದ್ದೀನ್ ಯತ್ಮಾರಿ, ಶರಣಪ್ಪ ಮೆದಿಕಿನಾಳ, ಸಿದ್ದರಾಮೇಶ ಮನ್ನಾಪುರ, ಮಲ್ಲಿಕಾರ್ಜುನ ಕಲ್ಲೂರು, ಸಲ್ಮಾನ ಜಾಗೀರದಾರ, ಮೌಲಸಾಬ ಟೇಲರ, ಮಹಾಂತೇಶ ಇದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.