ಕಾರ್ಮಿಕ ವಿರೋಧಿ ನೀತಿ ವಿರುದ್ಧ ಹೋರಾಟಕ್ಕೆ ಕರೆ
ರಾಯಚೂರು: ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಒಂದಾಗಿ ಎಲ್ಲ ಕಾರ್ಮಿಕರು ಹೋರಾಟಕ್ಕೆ ಮುಂದಾಗಬೇಕು. ಆಡಳಿತಗಾರರು ಕಾರ್ಮಿಕರ ಪರವಾದ ನಿಲುವು ತಳೆಯುತ್ತಿಲ್ಲ. ಇದರಿಂದ ಕಾರ್ಮಿಕರ ದೌರ್ಜನ್ಯ ಹೆಚ್ಚಿದೆ ಎಂದು ಎಐಯುಟಿಯುಸಿ ರಾಜ್ಯಾಧ್ಯಕ್ಷ ರಾಧಾಕೃಷ್ಣ ಆರೋಪಿಸಿದರು. ನಗರದಲ್ಲಿ ಇತ್ತೀಚೆಗೆ ಆರೋಗ್ಯ ಇಲಾಖೆಯ ಸಿ ಮತ್ತು ಡಿ ಗ್ರೂಪ್ ಗುತ್ತಿಗೆ ನೌಕರರ ಸಂಘದಿಂದ ಆಯೋಜಿಸಿದ್ದ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿ, ಹೊರಗುತ್ತಿಗೆ ಮೂಲಕ ನೇಮಕಗೊಂಡವರಿಗೆ ಅಗತ್ಯ ಸೌಲಭ್ಯ ಒದಗಿಸದೇ ಶೋಷಿಸಲಾಗುತ್ತಿದೆ.
ಕಾರ್ಮಿಕರ ಕಾಯಿದೆಗಳ ಪಾಲನೆಯಾಗುತ್ತಿಲ್ಲ. ಕಾರ್ಮಿಕ ವರ್ಗದ ಕ್ರಾಂತಿಯೊಂದೇ ಇಂಥ ಸಮಸ್ಯೆಗಳಿಗೆ ಪರಿಹಾರವಾಗಿದೆ.
ದುಡಿಯುವ ಕಾರ್ಮಿಕರು ಒಂದಾಗುವ ಮೂಲಕ ಶೋಷಣೆಯ ವಿರುದ್ಧ ಹೋರಾಡುವಂತೆ ಮನವಿ ಮಾಡಿದರು.
ಸಮಾರಂಭದಲ್ಲಿ ಡಾ. ಸುನೀತ್ ಕುಮಾರ್, ರಾಮಣ್ಣ ಉಪಸ್ಥಿತರಿದ್ದರು. ಸಂಘಟನೆಯ ಜಿಲ್ಲಾಧ್ಯಕ್ಷ ವೀರೇಶ್ ಎನ್.ಎಸ್. ಅಧ್ಯಕ್ಷತೆ ವಹಿಸಿದ್ದರು. ವಿವಿಧೆಡೆಯಿಂದ ಆಗಮಿಸಿದ್ದ ಕಾರ್ಮಿಕ ಸಂಘಟನೆಯ ಕಾರ್ಯಕರ್ತರು ಹಾಗೂ ಸಂಘದ ಪ್ರಮುಖರು ಪಾಲ್ಗೊಂಡಿದ್ದರು.