ದಾಖಲೆಗಳ ನೀಡಿಕೆಯಲ್ಲಿ ವಿಳಂಬ; ದಸಂಸ ದೂರು
ರಾಯಚೂರು: ತಾಲೂಕಿನ ದೇವಸೂಗೂರು ಗ್ರಾಮದ ನಾಡ ಕಚೇರಿಯಲ್ಲಿ ಪಹಣಿ ಪತ್ರಿಕೆ ಮತ್ತು ತಹಸೀಲ್ದಾರ್ ಕಚೇರಿಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡುವಲ್ಲಿ ವಿಳಂಬ ಮಾಡುತ್ತಿದ್ದು ಅದರಿಂದ ಜನತೆಗೆ ತೊಂದರೆಯಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಆರೋಪಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿರುವ ಸಂಘಟನೆಯ ಪ್ರಮುಖರಾದ ದುರುಗಪ್ಪ ಮ್ಯಾಗಳಮನಿ, ಹುಲಿಗೆಪ್ಪ ಹುಲಿ ಹಾಗೂ ರಂಗನಾಥ ಕೊರ್ತಕುಂದಾ ಅವರು, ದೇವಸೂಗೂರು ಗ್ರಾಮ ಸೇರಿದಂತೆ ಬಹುತೇಕ ಹೋಬಳಿ ಕೇಂದ್ರಗಳ ನಾಡ ಕಚೇರಿಗಳಲ್ಲಿ ಪಹಣಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ನೀಡಿಕೆಯಲ್ಲಿ ಸಾಕಷ್ಟು ವಿಳಂಬವಾಗುತ್ತಿದೆ ಎಂದು ಆರೋಪಿಸಿದ್ದಾರೆ.