ನವಲಕಲ್‌ನಲ್ಲಿ 20ರಂದು ಜಾತ್ರಾ ಮಹೋತ್ಸವ
ರಾಯಚೂರು: ಮಾನವಿ ತಾಲೂಕಿನ ನವಲಕಲ್ ಗ್ರಾಮದಲ್ಲಿ ಪವಾಡ ಪುರುಷ, ಮಹಾಮಹಿಮಶಾಲಿಗಳಾದ ಲಿಂ. ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿ 16ನೇ ಜಾತ್ರಾ ಮಹೋತ್ಸವ ಮಾ.20ರಂದು ನಡೆಯಲಿದೆ.
ನವಲಕಲ್ ಬ್ರಹನ್ಮಠದ ವತಿಯಿಂದ ನಡೆಯಲಿರುವ ಜಾತ್ರಾ ಮಹೋತ್ಸವದ ಸಾನಿಧ್ಯವನ್ನು ಅಭಿನವ ಸೋಮನಾಥ ಶಿವಾಚಾರ್ಯರು ವಹಿಸಲಿದ್ದಾರೆ. ನೀಲಗಲ್ ಬ್ರಹನ್ಮಠದ ಪಂಚಾಕ್ಷರಿ ಶಿವಾಚಾರ್ಯರು ಅವರ ಸಾನಿಧ್ಯದಲ್ಲಿ ಅಂದು ಬೆಳಗ್ಗೆ 8ಕ್ಕೆ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ನೆರವೇರಿಸಲಾಗುತ್ತದೆ.
ಸಂಜೆ 7ಕ್ಕೆ ನಡೆಯುವ ಶಿವಾನುಭವಗೋಷ್ಠಿ ಅಧ್ಯಕ್ಷತೆ ಶಾಂತಮಲ್ಲ ಶಿವಾಚಾರ್ಯರು ವಹಿಸಲಿದ್ದಾರೆ.
ಸಾನಿಧ್ಯವನ್ನು ಗಬ್ಬೂರಿನ ಬೂದಿಬಸವ ಶಿವಾಚಾರ್ಯ ವಹಿಸುವರು. ನೇತೃತ್ವವನ್ನು ಅಭಿನವ ರಾಚೋಟಿವೀರ ಶಿವಾಚಾರ್ಯರು ವಹಿಸಲಿದ್ದಾರೆ. ಆಲಮೇಲದ ಶ್ರೀಗಳು, ಗೆಜ್ಜೆಭಾವಿಯ ಅಭಿನವ ಚನ್ನಬಸವ ಶಿವಾಚಾರ್ಯ, ಮುರುಗೇಂದ್ರಮ ಸ್ವಾಮಿ, ಶಿವಕುಮಾರ ಸ್ವಾಮೀಜಿ, ಅಭಿನವ ರುದ್ರಮುನಿ ಶಿವಾಚಾರ್ಯ, ಸೋಮನಾಥ ಶಿವಾಚಾರ್ಯ, ರಾಚೇಟೇಶ್ವರ ಶಿವಾಚಾರ್ಯ, ಮುರುಗೇಂದ್ರ ದೇವರು ಪಾಲ್ಗೊಳ್ಳಲಿದ್ದಾರೆ.