ನ್ಯಾಯವಾದಿಗಳ ಸಂಘಕ್ಕೆಮುದುಕಪ್ಪ ಆಯ್ಕೆ
ಕನ್ನಡಪ್ರಭವಾರ್ತೆ, ಲಿಂಗಸ್ಗೂರು ಮಾ.17
ತಾಲೂಕು ನ್ಯಾಯವಾದಿಗಳ ಸಂಘಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಮುದುಕಪ್ಪ ಎಚ್. ವಕೀಲರು ಹಾಗೂ ಉಪಾಧ್ಯಕ್ಷರಾಗಿ ಮಹಾಲಿಂಗಪ್ಪ ಎಸ್.ವಕೀಲರು ಆಯ್ಕೆಗೊಂಡಿರುತ್ತಾರೆ.
ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮುದುಕಪ್ಪ ಎಚ್.ವಕೀಲರು 78 ಮತಗಳನ್ನು ಪಡೆದಿರುತ್ತಾರೆ. ಪ್ರತಿಸ್ಪರ್ಧಿ ಆಶಿಕ್ ಅಹ್ಮದ್ ವಕೀಲರು 61 ಮತಗಳನ್ನು ಪಡೆದಿರುತ್ತಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಹಾಲಿಂಗಪ್ಪ ಎಸ್. ವಕೀಲರು 72 ಮತಗಳನ್ನು ಪಡೆದಿರುತ್ತಾರೆ.
ಪ್ರತಿಸ್ಪರ್ಧಿ ಶಿವಲಿಂಗಪ್ಪ 67 ಮತಗಳನ್ನು ಪಡೆದಿರುತ್ತಾರೆ. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಜಂಬಣ್ಣ ಎಸ್. ವಕೀಲರು 77 ಮತಗಳನ್ನು ಪಡೆದಿರುತ್ತಾರೆ.
ಪ್ರತಿಸ್ಪರ್ಧಿ ಸಿ.ಮಾರುತಿ ವಕೀಲರು 60 ಮತಗಳನ್ನು ಪಡೆದಿರುತ್ತಾರೆ.
ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಸವರಾಜ ಹೊಸೂರು ವಕೀಲರು 66 ಮತಗಳನ್ನು ಪಡೆದಿರುತ್ತಾರೆ.
ಪ್ರತಿಸ್ಪರ್ಧಿಗಳಾದ ಪ್ರಭುಗೌಡ ಕನಸಾವಿ ವಕೀಲರು 57 ಮತಗಳು ಹಾಗೂ ಅಮರೇಶ ಆಶಿಹಾಳತಾಂಡಾ ವಕೀಲರು 11 ಮತಗಳನ್ನು ಪಡೆದಿರುತ್ತಾರೆ. ಸಹಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಸವಲಿಂಗಯ್ಯ ವಸ್ತ್ರದ ವಕೀಲರು 79 ಮತಗಳನ್ನು ಪಡೆದಿರುತ್ತಾರೆ. ಪ್ರತಿಸ್ಪರ್ಧಿ ಆನಂದ ರಾಠೋಡ ವಕೀಲರು 59 ಮತಗಳನ್ನು ಪಡೆದಿರುತ್ತಾರೆ. ತಾಲೂಕು ನ್ಯಾಯವಾದಿಗಳ ಸಂಘದ ಒಟ್ಟು 156 ವಕೀ ಲರು ಮತಗಳಲ್ಲಿ 140 ವಕೀಲರು ತಮ್ಮ ಹಕ್ಕು ಚಲಾಯಿಸಿರುತ್ತಾರೆಂದು ಚುನಾವಣಾಧಿಕಾರಿಗಳಾದ ರುದ್ರಪ್ಪ ನಾಯಕ ವಕೀಲರು ಹಾಗೂ ಹನುಮಂತಪ್ಪ ಸರ್ಜಾಪುರ ವಕೀಲರು ತಿಳಿಸಿರುತ್ತಾರೆ.