ಹೈ.ಕ. ದಸಂಸ ಹೋರಾಟ ಹಿಂದಕ್ಕೆ
ರಾಯಚೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೈ.ಕ. ದಸಂಸ ಕಾರ್ಯಕರ್ತರು ನಗರದ ತಾಪಂ ಎದುರು ನಡೆಸುತ್ತಿದ್ದ ಅನಿರ್ದಿಷ್ಟ ಧರಣಿ ಕೈಬಿಟ್ಟಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಸಂಘದ ತಾಲೂಕು ಅಧ್ಯಕ್ಷ ಶರಭಣ್ಣ ಅವರು, ಶಾಖವಾದಿ ಗ್ರಾಮದ ಗ್ರಾಪಂ ಸದಸ್ಯರಾದ ಸೈಯದ್ ಗೌಸ್ ಪಾಷಾ ಮತ್ತು ಸೈಯದ್ ಇನಾಯತ್ ಪಾಷಾ ಅವರು ಇಂದಿರಾ ಆವಾಸ್ ವಸತಿ ಯೋಜನೆ ಅಡಿ ಅಕ್ರಮವಾಗಿ ಮಂಜೂರು ಮಾಡಿದ್ದ ಮನೆಗಳ ಹಂಚಿಕೆ ರದ್ದುಗೊಳಿಸಿದ ಆದೇಶ ಪ್ರತಿಯನ್ನು ಸಂಘಟನೆಗೆ ನೀಡಿದ್ದರಿಂದ ಧರಣಿ ಹಿಂಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ನಡೆದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಸಂಘಟನೆಯ ಗೋವಿಂದರಾಜು ಹೊಸೂರು, ರಂಗಪ್ಪ ಶಕ್ತಿನಗರ, ರಾಮಾಂಜನೇಯಲು, ತಾಯಪ್ಪ, ಟೇಕಪ್ಪ, ಜಿಂದಪ್ಪ ಸೇರಿದಂತೆ ಅನೇಕರಿದ್ದರು.