ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಮಕ್ಕಳ ಸುಪ್ತ ಪ್ರತಿಭೆ ಅರಳಲಿ'

Lingaraj Badiger
Updated On : 19 Mar 2013, 11:06 am

ಸಿಂಧನೂರು: ಮಕ್ಕಳು ಅದ್ಭುತ ಜ್ಞಾನವನ್ನು ಹೊಂದಿರುತ್ತಾರೆ. ಪ್ರತಿಯೊಬ್ಬ ಮಕ್ಕಳಲ್ಲಿಯೂ ವಿಶೇಷ ಪ್ರತಿಭೆಗಳು ಇರುತ್ತವೆ. ಅವುಗಳು ಅರಳಲು ಶಾಲಾ ವಾರ್ಷಿಕೋತ್ಸವ ಸಮಾರಂಭಗಳು ನಡೆಯಬೇಕು. ಅವು ಪ್ರತಿಭೆ ಅರಳಿಸಲು ವೇದಿಕೆಗಳಾಗುತ್ತವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ.ವೃಷಭೇಂದ್ರಯ್ಯ ಸ್ವಾಮಿ ಹೇಳಿದರು.
ಗ್ಲೋರಿ ಶಿಕ್ಷಣ ಸಂಸ್ಥೆಯ 17ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಪಾಲಕರು ತಮ್ಮ ಮಕ್ಕಳ ಪ್ರತಿಭೆಯನ್ನು ಹೊರ ಹಾಕಿಸುವ ಯತ್ನ ಮಾಡಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಮಕ್ಕಳನ್ನು ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಪಾಲಕರು ಹಾಗೂ ಶಿಕ್ಷಕರು ಮಕ್ಕಳೊಂದಿಗೆ ಸಹಕರಿಸಿ ಉತ್ತಮ ಫಲಿತಾಂಶಕ್ಕೆ ಕಾರಣಿಕರ್ತರಾಗಬೇಕೆಂದು ಕರೆ ನೀಡಿದರು.
ಎಕ್ಸಲೆಂಟ್ ಕಾಲೇಜಿನ ಪ್ರಾಚಾರ್ಯ ಹೊನ್ನುರ ಹುಸೇನ ಮಾತನಾಡಿ, ಗ್ಲೋರಿ ಶಿಕ್ಷಣ ಸಂಸ್ಥೆ ಕಳೆದ 17 ವರ್ಷಗಳಿಂದ ನಟರಾಜ ಕಾಲೋನಿಯಲ್ಲಿ ಶೈಕ್ಷಣಿಕ ಬೆಳವಣಿಗೆಗೆ ಹೊಸ ಹೊಸ ಪ್ರಯೋಗಗಳನ್ನು ನಡೆಸುತ್ತಿದೆ. ಮುಂಬರುವ ದಿನಗಳಲ್ಲಿ ಸಂಸ್ಥೆ ಕಾಲೇಜಿನ ಹಂತಕ್ಕೂ ಬೆಳೆಯಲಿ ಎಂದು ಹಾರೈಸಿದರು.
ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಾತನಾಡಿ, ಗ್ಲೋರಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಎಸ್.ಡಿ. ತಿಮೊತಿ ದಂಪತಿಗಳು ತಾವು ದುಡಿಯುತ್ತಿದ್ದ ಆರ್‌ಜಿಎಂ ಸಂಸ್ಥೆಯನ್ನು ಬಿಟ್ಟು ಶಿಕ್ಷಣ ಸಂಸ್ಥೆಯನ್ನು ಕಟ್ಟುವ ಸಾಹಸಕ್ಕೆ ಕೈ ಹಾಕಿರುವ ಹಿಂದಿನ ಯಶೋಗಾಥೆಯನ್ನು ಸಭೆಗೆ ನೆನಪಿಸಿ ಅವರ ಸೇವೆಯನ್ನು, ಆದರ್ಶಗಳನ್ನು ಸಂಸ್ಥೆಯ ವಾರಸುದಾರರು ಮುಂದುವರೆಸಬೇಕೆಂದು ಮನವಿ ಮಾಡಿದರು.
ಕರ್ನಾಟಕ ರಾಜ್ಯ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಗ್ಲೋರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜೋಯ್ ಲೂಕಾಸ್, ಕಾರ್ಯದರ್ಶಿ ಸ್ಟೇಫಿ ತಿಮೊತಿ, ಮುಖ್ಯೋಪಾಧ್ಯಾಯಿನಿ ಕೃಪಾ ಪಾಲ್ಗೊಂಡಿದ್ದರು. ಶಿಕ್ಷಕಿಯರಾದ ತುಳಜಾರಾಣಿ, ಜಲಜಾಕ್ಷಿ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಹುಸೇನಪ್ಪ ಸ್ವಾಗತಿಸಿದರು. ವಿರೇಶ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement