ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮುದಗಲ್ ತಾಲೂಕು ಕೇಂದ್ರಕ್ಕಾಗಿ ಪ್ರತಿಭಟನೆ

Lingaraj Badiger
Updated On : 19 Mar 2013, 10:42 am

ಮುದಗಲ್: ಮುದಗಲ್ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ತಾಲೂಕು ಕೇಂದ್ರವಾಗಲು ಬೇಕಾದಂತಹ ವ್ಯವಸ್ಥೆಯನ್ನು ಮುದುಗಲ್ ಹೊಂದಿದೆ. ಸುತ್ತಲಿನ 9 ಗ್ರಾಪಂ ಕೇಂದ್ರಗಳಿಗೆ ಹತ್ತಿರವಾಗಿದೆ. ಸಮುದಾಯ ಆರೋಗ್ಯ ಕೇಂದ್ರ, ಪದವಿ ಕಾಲೇಜು, ರಾಜ್ಯ ಹೆದ್ದಾರಿ ಹೊಂದಿದೆ.
 ನಾಡ ತಹಸೀಲ್ದಾರ್ ಕಚೇರಿ, ಕೃಷಿ ಉತ್ಪನ್ನ ಉಪಮಾರುಕಟ್ಟೆ, ಹೊಂದಿದೆ. ಮುದಗಲ್ ಸುತ್ತಮುತ್ತ 57 ಕಂದಾಯ ಗ್ರಾಮಗಳು, 18 ತಾಂಡಾಗಳು ಸೇರಿದ್ದು, ಪ್ರಮುಖ ವ್ಯಾಪಾರಿ ಕೇಂದ್ರವಾಗಿದೆ.
ಅರ್ಹತೆ ಇದೆ: ಮುದಗಲ್ ತಾಲೂಕು ಕೇಂದ್ರವನ್ನಾಗಿ ಮಾರ್ಪಾಡು ಮಾಡಬೇಕು ಎಂದು ಸ್ಥಳೀಯ ನಾಗರಿಕರು 10 ವರ್ಷಗಳಿಂದ ಹೋರಾಟ ಮಾಡಿದ್ದಾರೆ.
  ಆದರೆ ರಾಜ್ಯ ಸರ್ಕಾರ ಇದನ್ನು ಯಾಕೆ ಮರೆತಿದೆ ಎನ್ನುವುದು ತಿಳಿಯುತ್ತಿಲ್ಲ. ಮುದಗಲ್ ಪಟ್ಟಣ ಗ್ರಾನೈಟ್ ಉದ್ಯಮದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ತಾಲೂಕು ಕೇಂದ್ರವಾಗಲು ಬೇಕಾದ ಎಲ್ಲಾ ಅರ್ಹತೆ, ಸೌಲಭ್ಯಗಳು ಪಟ್ಟಣದಲ್ಲಿ ಇದೆ. ಆದ್ದರಿಂದ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಎಂದು ಕರವೇ ಕಾರ್ಯಕರ್ತರು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ನಾಡ ತಹಸೀಲ್ದಾರ್‌ಗೆ ನೀಡಿದರು.
ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮುದಗಲ್ ಕರವೇ ಘಟಕದ ಅಧ್ಯಕ್ಷ ಎಸ್.ಎ. ನಯಿಮ್, ಎಸ್.ಎನ್. ಖಾದ್ರಿ, ಸಾಬ್ ಹುಸೇನ್, ಎಂ.ಡಿ. ಇಸ್ಮಾಯಿಲ್, ವೀರೇಶ ಕುಂಬಾರ, ಸುಭಾಷ ಈರ್ಲಾ, ಮುರ್ತುಜಾ ದೋಂಗ್ರಿ, ಅನ್ವರಮಿಯಾ, ಸಮೀರ್, ಹೇದರ್, ಸಾಧಿಕ್, ಹಸನ್, ಬಂದೇನವಾಜ್, ಲೋಕೇಶ, ನಾಗರಾಜ ಮಟ್ಟೂರು, ಸುರೇಶ ಬಂಡಾರಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement