ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಶಹರಿ ರೋಜಗಾರ್ ಸದುಪಯೋಗವಾಗಿಲಿ

Lingaraj Badiger
Updated On : 19 Mar 2013, 10:43 am

ಸಿಂಧನೂರು: ಸ್ವರ್ವ ಜಯಂತಿ ಶಹರಿ ರೋಜಗಾರ ಯೋಜನೆಯಡಿಯಲ್ಲಿ ಮಹಿಳೆಯರನ್ನು ಆರ್ಥಿಕ ಸ್ವಾವಲಂಬನೆ ಮಾಡಲು ವಿಶೇಷ ತರಬೇತಿಗಳನ್ನು ನೀಡಲಾಗುತ್ತಿದ್ದು, ಮಹಿಳೆಯರು ಯೋಜನೆಯನ್ನು ಸದುಪಯೋಗ ಮಾಡಿಕೊಳ್ಳುವ ಮೂಲಕ ಸ್ವಯಂ ಉದ್ಯೋಗಿಗಳಾಗುವಂತೆ ಎಸ್‌ಜೆಎಸ್‌ಆರ್‌ವೈ ಸಿಡಿಎಸ್‌ನ ಆಡಳಿತಾಧಿಕಾರಿ ಶಶಿಕಲಾ ಕರೆ ನೀಡಿದರು.
ನಗರದ ನಗರಸಭೆಯ ಎಸ್‌ಜೆಎಸ್‌ಆರ್‌ವೈನ ಸಭಾಭವನದಲ್ಲಿ ಸೋಮವಾರ ದೇವದುರ್ಗಾದ ವಿದ್ಯಾಶ್ರೀ ಶಿಕ್ಷಣ ಸಂಸ್ಥೆ (ವಿಟಿಪಿ ಕೇಂದ್ರ) ಯಿಂದ ಹಮ್ಮಿಕೊಳ್ಳಲಾಗಿದ್ದ ಕ್ಯಾಂಡಲ್ ಸೋಪ್, ಫಿನಾಯಿಲ್ ಹಾಗೂ ಥೇರಫಿಕ್ ಮಸಾಜ್‌ಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯ ಸ್ವಾವಲಂಬನೆಗೆ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ. ಮಹಿಳೆಯರು ಯೋಜನೆಗಳನ್ನು ಪಡೆದುಕೊಳ್ಳುವ ಮೂಲಕ ಆರ್ಥಿಕ ಸ್ವಾವಲಂಬಿಗಳಾಗಬೇಕಿದೆ ಎಂದರು.
ಪೌರಾಯುಕ್ತ ನಾಸೀರ್ ಅಲಿ ಮಾತನಾಡಿ, ಸ್ಟೆಪ್‌ಅಪ್ ಅನುದಾನದಲ್ಲಿ ಮಹಿಳೆಯರಿಗೆ ವಿವಿಧ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದೆ. ನಗರಸಭೆಯ ಸಿಎಓ ದುರುಗಪ್ಪ ಹಸಮಕಲ್ ಪ್ರಾಸ್ತಾವಿಕ ಮಾತನಾಡಿದರು.
ಸಂಸ್ಥೆ  ಕಾರ್ಯದರ್ಶಿ ತಿರುಪತಿ, ಉಪನ್ಯಾಸಕ ಶಿವರಾಜ ಎಸ್.ಡಿ, ಸಂಪನ್ಮೂಲ ವ್ಯಕ್ತಿ  ಹನುಮಂತ ಬೂದಿನಾಳ, ಮಲ್ಲಿಕಾರ್ಜುನ ತರಬೇತಿ ನೀಡಿದರು. ತರಬೇತಿಯಲ್ಲಿ ಅನೇಕ ಮಹಿಳೆಯರು  ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement