ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಎನ್ನೆಸ್ಸೆಸ್ ಶಿಬಿರ

Mainashree
Updated On : 20 Mar 2013, 11:55 am

ರಾಯಚೂರು: ಇಲ್ಲಿನ ನಗರದ ಕೃಷಿ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕದ ಆಶ್ರಯದಲ್ಲಿ ಮಾ.22ರಿಂದ 28ರವರೆಗೆ ವಿಶೇಷ ವಾರ್ಷಿಕ ಎನ್ನೆಸ್ಸೆಸ್ ಶಿಬಿರವನ್ನು ಆಯೋಜಿಸಲಾಗಿದೆ.
ತಾಲೂಕಿನ ಸಿಂಗನೋಡಿ ಗ್ರಾಮದಲ್ಲಿ ಶಿಬಿರ ನಡೆಯಲಿದ್ದು, ಯೋಗ ಮತ್ತು ಧ್ಯಾನ, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಸಂರಕ್ಷಣೆ, ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳನ್ನು ಶಿಬಿರದಲ್ಲಿ ಆಯೋಜಿಸಲಾಗಿದೆ. ಕೃಷಿ ಸಂಬಂಧಿ ಮಾಹಿತಿ ನೀಡಿಕೆ, ಜಾನುವಾರುಗಳಿಗೆ ಲಸಿಕೆ ನೀಡಿಕೆಯಂಥ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಮಹಾವಿದ್ಯಾಲಯದ ಪ್ರಕಟಣೆ ತಿಳಿಸಿದೆ.

# 40 ಲಕ್ಷ ಮಂಜೂರು
ರಾಯಚೂರು: ತಾಲೂಕಿನ ಕಲ್ಮಲಾ ಗ್ರಾಮದ ಕರಿಯಪ್ಪ ತಾತನವರ ದೇವಸ್ಥಾನದಲ್ಲಿ ಯಾತ್ರಿ ನಿವಾಸಕ್ಕಾಗಿ ರಾಜ್ಯ ಸರ್ಕಾರ # 40ಲಕ್ಷ ಮಂಜೂರು ಮಾಡಿದೆ.
ಈ ಕುರಿತು ಪ್ರವಾಸೋದ್ಯಮ ಇಲಾಖೆಯು ಹೊರಡಿಸಿರುವ ಆದೇಶವನ್ನು ಬಿಜೆಪಿ ಮುಖಂಡ ತಿಪ್ಪರಾಜು, ಕಲ್ಮಲಾ ಗ್ರಾಮದಲ್ಲಿ ದೇವಸ್ಥಾನ ಸಮಿತಿಯವರಿಗೆ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಪೂಜಾರಿ ಬಸವರಾಜ,  ನಾಗೇಶ ನಾಯಕ,  ಬಸವರಾಜ ದಳವಾಯಿ, ಲಿಂಗರಾಜು, ಚನ್ನಬಸವನಗೌಡ, ಮಹೇಶ ಪಾಟೀಲ್ ಉಪಸ್ಥಿತರಿದ್ದರು.

ಡಿಕ್ಕಿ: ಬಾಲಕ ಸಾವು
ರಾಯಚೂರು: ಮಾನವಿ ತಾಲೂಕಿನ ಕೋಟೆಕಲ್ ಗ್ರಾಮದ ಬಳಿ ಕಾರೊಂದು ರಸ್ತೆ ಬದಿ ಸಾಗುತ್ತಿದ್ದ ಬಾಲಕಗೆ ಡಿಕ್ಕಿ ಹೊಡೆದು ಆತ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ.
ಮೃತನನ್ನು ಆನಂದ ಎಂದು ಗುರುತಿಸಲಾಗಿದೆ.  ಲಿಂಗಸ್ಗೂರು-ರಾಯಚೂರು ರಸ್ತೆಯಲ್ಲಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಕಾರಣ, ತೀವ್ರ ಗಾಯಗೊಂಡ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement