ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಜಾಹೀರಾತು ಮೋಡಿಗೆ ಮೋಸ ಹೋಗದಿರಿ'

Mainashree
Updated On : 20 Mar 2013, 11:53 am

ರಾಯಚೂರು: ಸರಕು ಖರೀದಿಸುವವರು ಜಾಹೀರಾತಿನ ಮೋಹಕ್ಕೆ ಒಳಗಾಗದೆ ಗುಣಮಟ್ಟದ ಸರಕು ಖರೀದಿಗೆ ಗಮನಹರಿಸಬೇಕು. ಪ್ರತಿ ಖರೀದಿಗೆ ನಿಗದಿತ ರಸೀದಿ ಪಡೆಯುವುದನ್ನು ಎಂದಿಗೂ ಮರೆಯಬಾರದೆಂದು ಜಿಲ್ಲಾ ಪ್ರಧಾನ ಮತ್ತ ಸತ್ರ ನ್ಯಾಯಾಧೀಶ ಎಸ್.ಎಚ್. ಮಿಟ್ಟಲಕೋಡ್ ಸಲಹೆ ನೀಡಿದರು.
ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಮತ್ತು ಕಾನೂನು ಮಾಪನ ಶಾಸ್ತ್ರದ ವತಿಯಿಂದ ಈಚೆಗೆ ಆಯೋಜಿಸಿದ್ದ ವಿಶ್ವ ಗ್ರಾಹಕರ ದಿನಾಚರಣೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಹಕರ ರಕ್ಷಣೆಗೆ ಅನೇಕ ಕಾನೂನುಗಳಿದ್ದು, ಕಾನೂನಿನ ಮೂಲಕ ಗ್ರಾಹಕರು ನ್ಯಾಯ ಪಡೆಯಲು ಕರೆ ನೀಡಿದರು.
ಜಿಲ್ಲೆಯಲ್ಲಿ ಸುಮಾರು ಮೂರೂವರೆ ಲಕ್ಷದಷ್ಟು ಗ್ರಾಹಕರಿದ್ದು, ಅವರಿಗೆ ಗ್ರಾಹಕರ ಕಾನೂನುಗಳ ಬಗ್ಗೆ ಜಾಗಣತಿ ಮೂಡಿಸುವ ಕಾರ್ಯವಾಗಬೇಕಿದೆ. ಗ್ರಾಹಕರ ಜಾಗೃತಿಗೆ ಕ್ಲಬ್‌ಗಳ ರಚನೆಯಾಗಬೇಕಿದೆ ಎಂದ ಅವರು, ಔಷಧಿಗಳನ್ನು ಕೊಳ್ಳುವಾಗ ವೈದ್ಯರು ಸೂಚಿಸಿದ ಔಷಧಿ ಮಾತ್ರ ಖರೀದಿಸಬೇಕು. ಯಾವುದೇ ಕಾರಣಕ್ಕೆ ಪರ್ಯಾಯ ಔಷಧಿ ಖರೀದಿಸದಂತೆ ಸಲಹೆ ನೀಡಿದರು.
ಮುಖ್ಯ ಅತಿಥಿ ಜಿಲ್ಲಾ ಕಾರಾಗೃಹ ಅಧೀಕ್ಷಕ ಐ.ಜಿ. ಮ್ಯಾಗೇರಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಸದಸ್ಯೆ ಪ್ರತಿಭಾರಾಣಿ ಹಿರೇಮಠ ಮಾತನಾಡಿದರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷ ಪಂಪಾಪತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಆಹಾರ ಇಲಾಖೆಯ ಉಪ ನಿರ್ದೇಶಕ ಗುರುರಾಜ್, ಸಹಾಯಕ ನಿರ್ದೇಶಕ ಷಡಕ್ಷರಯ್ಯ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement