ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಯುವ ಸಮುದಾಯ ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಲಿ: ಈಳಗೇರ

Mainashree
Updated On : 20 Mar 2013, 11:52 am

ಲಿಂಗಸ್ಗೂರು: ಇಂದಿನ ಆಧುನಿಕ ಯುಗದಲ್ಲಿ ಯುವಜನತೆ ವೈಚಾರಿಕ, ನೈತಿಕ ಶಿಕ್ಷಣ ಪಡೆಯುವ ಮೂಲಕ ಅನ್ಯಾಯವನ್ನು ಪ್ರತಿಭಟಿಸುವ ಹಾಗೂ ಸಾಮಾಜಿಕ ಕಳಕಳಿಯ ಮನಸ್ಸು ಹೊಂದುವುದು ಅಗತ್ಯ ಎಂದು ವಿಸಿಬಿ ಕಾಲೇಜು ಉಪನ್ಯಾಸಕ ಯಲ್ಲಪ್ಪ ಈಳಗೇರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ಅಮರೇಶ್ವರ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಎಐಡಿಎಸ್‌ಒ ಮತ್ತು ಎಐಡಿವೈಒ ವತಿಯಿಂದ ಹಮ್ಮಿಕೊಂಡಿದ್ದ, ಶಹೀದ್ ಭಗತ್‌ಸಿಂಗ್‌ರ 82ನೇ ಹುತಾತ್ಮ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ಆರಂಭಕ್ಕೆ ಚಾಲನೆ ನೀಡಿ ಮಾತನಾಡಿ, ದೇಶಕ್ಕೆ ಸ್ವತಂತ್ರ್ಯ ದೊರೆತು 67 ವರ್ಷ ಗತಿಸಿದರೂ ಎಲ್ಲ ರಂಗಗಳಲ್ಲಿ ಅಭಿವೃದ್ಧಿ ಕಾಣದೆ ಅಸಮಾನತೆ, ನಿರುದ್ಯೋಗ, ಬೆಲೆ ಏರಿಕೆ, ಶಿಕ್ಷಣದ ವ್ಯಾಪಾರಿಕರಣ, ಸ್ವಾರ್ಥ, ಸಿನಿಕತನ ವ್ಯಾಪಕವಾಗಿ ಹರಡುತ್ತಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿ ಯುವಜನತೆಗೆ ಭಗತ್‌ಸಿಂಗ್‌ರ ಜೀವನ ಹಾಗೂ ಅವರ ಆದರ್ಶ ಮಾರ್ಗ ಸಹಕಾರಿಯಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಚಾರ್ಯ ಅಣ್ಣಯ್ಯ, ಉಪನ್ಯಾಸಕರಾದ ಸಿದ್ದಪ್ಪ ಭಾವಿಮನಿ, ಕಣ್ಮೇಶ, ಕೋರೆನಲ್, ಸೋಮಶೇಖರ, ಸಂಘಟನೆಯ ಮುಖಂಡರಾದ ತಿರುಪತಿ ಗೋನವಾರ, ಶರಣಪ್ಪ ಉದ್ಬಾಳ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement