ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಿಧಿ ಆಸೆಗೆ ಆದಿ ಬಸವೇಶ್ವರ ಮೂರ್ತಿ ಕದ್ದ ಖದೀಮರು

Mainashree
Updated On : 21 Mar 2013, 11:45 am

ಮುದಗಲ್: ಪಟ್ಟಣ ಸಮೀಪದ ನಾಗಲಾಪುರ-ಉಳಿಮೇಶ್ವರ ಗ್ರಾಮದ ಮಧ್ಯೆ ಮುಖ್ಯ ರಸ್ತೆಗೆ ಹೊಂದಿಕೊಂಡಿದ್ದ ಆದಿ ಬಸವೇಶ್ವರ ಮೂರ್ತಿಯನ್ನು ಕಿತ್ತು ನೆಲ ಅಗೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪುರಾತನವಾಗಿದ್ದ ಸಣ್ಣ ಗರ್ಭಗುಡಿಯಲ್ಲಿಟ್ಟಿದ್ದ ನಂದಿ ಮೂರ್ತಿಯನ್ನು ಕಿತ್ತಿರುವ ದುಷ್ಕರ್ಮಿಗಳು ಅದರ ಕೆಳಗಡೆ ಸುಮಾರು ಎರಡು ಅಡಿಯಷ್ಟು ಗುಂಡಿ ತೋಡಿದ್ದಾರೆ. ಅಲ್ಲದೆ ಪಕ್ಕದಲ್ಲಿದ್ದ ಆದಿಶೇಷ ಮತ್ತು ಸಣ್ಣ, ಸಣ್ಣ ಮೂರ್ತಿಗಳನ್ನ ಕಿತ್ತು ಬಿಸಾಡಿದ್ದಾರೆ.
ಮೂರ್ತಿ ಕಿತ್ತಿರುವ ಸ್ಥಿತಿಯನ್ನು ನೋಡಿದ ಗ್ರಾಮಸ್ಥರು, ಇದು ನಿಧಿ ಆಸೆಗೆ ಮಾಡಿದ ದುಷ್ಕೃತ್ಯವಾಗಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ನಾಗಲಾಪುರ ಹಾಗೂ ಉಳಿಮೇಶ್ವರ ಎರಡು ಗ್ರಾಮಗಳ ಮಧ್ಯೆ ಸುಮಾರು ಒಂದು ಕಿಮೀ ಅಂತರದ ಆದಿ ಬಸವೇಶ್ವರ ದೇವಸ್ಥಾನಕ್ಕೆ ಸಾಕಷ್ಟು ಜನರ ಹರಕೆ ಸಲ್ಲಿಸುತ್ತಿದ್ದರು ಎಂದು ಗ್ರಾಮಸ್ಥರು ಹೇಳುತ್ತಾರೆ.
ಹತ್ತು, ಹನ್ನೆರಡು ದಿನಗಳ ಹಿಂದೆ ದೇವಸ್ಥಾನದ ಹತ್ತಿರ ಮಧ್ಯರಾತ್ರಿ ನಾಲ್ಕು ಜನರೊಂದಿಗೆ ಅಟೋರಿಕ್ಷಾ ಒಂದು ನಿಂತಿತ್ತು. ಅಂದಿನಿಂದ ಮೂರ್ತಿ ಕಾಣೆಯಾಗಿದೆ ಎಂದು ಗ್ರಾಮಸ್ಥರು ವಿವರಿಸುತ್ತಾರೆ.
ಒಟ್ಟಾರೆ ಮುದಗಲ್ ಭಾಗದಲ್ಲಿ ಇತ್ತೀಚೆಗೆ ನಿಧಿಗಳ್ಳತನದ ಪ್ರಕರಣಗಳು ಕೇಳಿ ಬರುತ್ತಿವೆ. ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement