ನೀರಿನ ಸಮಸ್ಯೆ; ಪರಿಹಾರಕ್ಕೆ ಆಗ್ರಹ
ದೇವದುರ್ಗ: ಪಟ್ಟಣದ ಅಬುಮೊಹಲ್ಲಾದಲ್ಲಿ ಕಳೆದೊಂದು ವಾರದಿಂದ ಕುಡಿವ ನೀರಿನ ಪೂರೈಕೆಯಾಗದೇ ಜನತೆ ತೊಂದರೆ ಎದುರಿಸುತ್ತಿದ್ದು, ಕೂಡಲೇ ನೀರಿನ ಸಮಸ್ಯೆ ಪರಿಹರಿಸುವಂತೆ ವಾರ್ಡಿನ ನಾಗರಿಕರು ಮತ್ತು ಮಾಜಿ ಪುರಸಭೆ ಸದಸ್ಯ ಸಿದ್ದಪ್ಪ ಮಜ್ಗಿ ಒತ್ತಾಯಿಸಿದ್ದಾರೆ.
ಈ ಕುರಿತು ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಅಬುಮೊಹಲ್ಲಾ ಪ್ರದೇಶದ ಬಳಿಯೇ ನೀರಿನ ತೊಟ್ಟಿದ್ದು, ನೀರು ಹರಿಸುವ ಸಿಬ್ಬಂದಿಯ ಅಸಮರ್ಪಕ ಕಾರ್ಯನಿರ್ವಹಣೆಯಿಂದಾಗಿ ವಾರ್ಡಿಗೆ ನೀರು ದೊರೆಯುತ್ತಿಲ್ಲ. ಸಾರ್ವಜನಿಕರ ಮನವಿಗೆ ಸಿಬ್ಬಂದಿ ಸ್ಪಂದಿಸುತ್ತಿಲ್ಲ ಎಂದು ದೂರಿದ್ದಾರೆ. ಈ ನಿಟ್ಟಿನಲ್ಲಿ ಕೂಡಲೇ ಸಮಸ್ಯೆ ಪರಿಹರಿಸದಿದ್ದರೆ ಶೀಘ್ರ ಪುರಸಭೆ ಎದುರು ಧರಣಿ ನಡೆಸುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರೈತ ವಿಭಾಗದ ಅಧ್ಯಕ್ಷ ಜಿ.ಬಸವರಾಜ ನಾಯಕ, ಜಿ.ನಾಗರಾಜ, ಸೂಗೂರುನಾಥ ಜೋಗಿ, ಬಾಬು, ವಿಶ್ವನಾಥ ಜೋಗಿ, ರಫಿಕ್ ಸೇರಿ ವಾರ್ಡಿನ ಜನತೆ ಇದ್ದರು.