ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ

Mainashree
Updated On : 22 Mar 2013, 11:56 am

ರಾಯಚೂರು: ಲಿಂಗಸ್ಗೂರು ತಾಲೂಕಿನ ಬಯಲಗುಡ್ಡದಲ್ಲಿ ಅನೈತಿಕ ಸಂಬಂಧ ಹಿನ್ನೆಲೆ ವ್ಯಕ್ತಿಯೊಬ್ಬನನ್ನು ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 12 ಸಾವಿರ ದಂಡ ವಿಧಿಸಿ ಇಲ್ಲಿನ ನ್ಯಾಯಾಲಯ ತೀರ್ಪು ನೀಡಿದೆ.
ಬಯಲುಗುಡ್ಡದಲ್ಲಿ ಕನಕಪ್ಪ ಎಂಬಾತ ರಾಚನಗೌಡ ಎಂಬಾತನ ಪತ್ನಿ ಜತೆ ಅನೈತಿಕ ಸಂಬಂಧವಿರಿಸಿಕೊಂಡ ಬಗ್ಗೆ ಶಂಕಿಸಿ ಕನಕಪ್ಪನನ್ನು ಲಾಲಸಾಬ್, ಹನುಮಂತ, ಬಾಲಪ್ಪ ಎಂಬುವವರ ಮೂಲಕ ಕೊಲೆ ಮಾಡಿ ಶವವನ್ನು ನಂತರ ಹೂಳಲಾಗಿತ್ತು.
ಕೊಲೆಯಾದ ಕನಕಪ್ಪನ ಪತ್ನಿ ಪಾರ್ವತಮ್ಮ ಎಂಬಾಕೆ ಪೊಲೀಸರಿಗೆ ದೂರು ನೀಡಿದ್ದಳು. ಈ ಕುರಿತು ಮಸ್ಕಿ ಪೊಲೀಸರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ತ್ವರಿತ ವಿಲೇವಾರಿ ನ್ಯಾಯಾಲಯದ ನ್ಯಾಯಧೀಶರಾದ ಕಾಡ್ಲೂರು ಸತ್ಯನಾರಾಯಣಾಚಾರ್ಯ ಅವರು ಆರೋಪಿಗಳಿಗೆ ಕಠಿಣ ಜೀವಾವಧಿ ಕಾರಾಗೃಹ ವಾಸ ಮತ್ತು ತಲಾ 12 ಸಾವಿರ ದಂಡ ಹಾಗೂ ರಾಚನಗೌಡಗೆ ಜೀವಾವಧಿ ಶಿಕ್ಷೆ ಜತೆ 10 ಸಾವಿರ ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸಾರ್ವಜನಿಕ ಅಭಿಯೋಜಕ ಬಿ.ರಂಗಯ್ಯ ವಾದ ಮಂಡಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement