ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪತ್ರಕರ್ತನ ಮೇಲೆ ಹಲ್ಲೆ; ಕ್ರಮಕ್ಕೆ ಆಗ್ರಹಿಸಿ ಮನವಿ

Mainashree
Updated On : 22 Mar 2013, 11:57 am

ಕ.ಪ್ರ. ವಾರ್ತೆ ರಾಯಚೂರು ಮಾ.21
ನಗರದಲ್ಲಿ ಪಡಿತರ ಚೀಟಿ ವಿತರಣೆಯಲ್ಲಿ ನಿಗದಿಗಿಂತ ಹೆಚ್ಚಿನ ಶುಲ್ಕವನ್ನು ಪಡೆಯುತ್ತಿರುವ ಬಗ್ಗೆ ವರದಿ ಮಾಡಿದ ಇನ್ ಕೇಬಲ್ ವಾಹಿನಿಯ ವರದಿಗಾರ ಉಪೇಂದ್ರ ಕೇಶವರಾವ್ ಅವರ ಮೇಲೆ ಕೆಲ ದುಷ್ಕರ್ಮಿಗಳು ಹಲ್ಲೆ ಮಾಡಿರುವ ಘಟನೆಯನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಖಂಡಿಸಿದೆ.
ಈ ಕುರಿತು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅವರಿಗೆ ದೂರು ಸಲ್ಲಿಸಿ, ಹೆಚ್ಚುವರಿ ಶುಲ್ಕ ಪಡೆದವರ ಬಗ್ಗೆ ವರದಿಯಲ್ಲಿ ಯಾವುದೇ ವಿಚಾರ ಪ್ರಸ್ತಾಪವಿಲ್ಲದಿದ್ದರೂ ವರದಿಗಾರನ ಮೇಲೆ ಹಲ್ಲೆ ಮಾಡಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.
ಅಧಿಕ ಶುಲ್ಕ ಪಡೆದ ಆರೋಪವಿತ್ತು: ನಗರದ ವಿವಿಧೆಡೆ ಆನ್‌ಲೈನ್ ಮೂಲಕ ಪಡಿತರ ಚೀಟಿ ವಿತರಣೆ ಪ್ರಕ್ರಿಯೆ ಜಾರಿಯಲ್ಲಿದ್ದು, ಪ್ರತಿ ಕುಟುಂಬಕ್ಕೆ 50 ಶುಲ್ಕ ಪಡೆಯಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಏಜೆಂಟರಿಗೆ ಸೂಚಿಸಿದೆ. ಆದರೆ ಪ್ರಕ್ರಿಯೆಯಲ್ಲಿ ತೊಡಗಿರುವವರು 100ರಿಂದ 150ರವರೆಗೆ ಹಣ ಪಡೆಯುತ್ತಿದ್ದಾರೆಂಬ ಆರೋಪ ಕೇಳಿಬಂದಿತ್ತು. ಈ ಕುರಿತು ವರದಿ ಮಾಡಿದ ಉಪೇಂದ್ರ ಕೇಶವರಾವ್ ಅವರ ಮೇಲೆ ಗುರುವಾರ ಬೆಳಗ್ಗೆ ಇಬ್ಬರು ಹಲ್ಲೆ ಮಾಡಿದ್ದಾರೆ. ಇದರಿಂದ ಪತ್ರಕರ್ತರು ಅಸುರಕ್ಷಿತ ವಾತಾವರಣದಲ್ಲಿ ಕಾರ್ಯನಿರ್ವಹಿಸುವಂತಾಗಿದೆ ಎಂದು ದೂರಿದರು.
ಈ ಕುರಿತು ಕೂಡಲೇ ಜಿಲ್ಲಾಡಳಿತ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಘದಿಂದ ಒತ್ತಾಯಿಸಲಾಯಿತು. ಈ ವೇಳೆ ಸಂಘದ ಪ್ರಮುಖರಾದ ಚನ್ನಬಸವಣ್ಣ, ವೆಂಕಟಸಿಂಗ್, ಭೀಮರಾಯ ಹದ್ದಿನಾಳ, ಬಸವರಾಜ ನಾಗಡದಿನ್ನಿ, ಕೆ.ಸತ್ಯನಾರಾಯಣ, ದತ್ತು ಸರ್ಕಿಲ್, ಭೀಮಣ್ಣ ಹೀರಾ, ಶಿವಪ್ಪ ಮಡಿವಾಳರ್, ಅಮರೇಶ್ ಸೇರಿದಂತೆ ಅನೇಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement