ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಿಎಸ್‌ವೈ ಜನಪ್ರಿಯತೆ ಸಹಿಸದ ಬಿಜೆಪಿ

Mainashree
Updated On : 22 Mar 2013, 11:55 am

ಮಸ್ಕಿ: ಇಲ್ಲಿನ ಭ್ರಮರಾಂಬಾ ದೇವಸ್ಥಾನದಲ್ಲಿ ಬುಧವಾರ ಸಂಜೆ ಕೆಜೆಪಿ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು ಮಾಜಿ ಸಚಿವ ಸಿ.ಎಂ.ಉದಾಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ, ಮಾಜಿ ಸಿಎಂ ಹಾಗೂ ಕೆಜೆಪಿ ಅಧ್ಯಕ್ಷ ಯಡಿಯೂರಪ್ಪನವರ ಜನಪ್ರಿಯತೆ ಸಹಿಸಲಾಗದೇ ಅವರ ಪಕ್ಷದವರೇ ಬೆನ್ನಿಗೆ ಚೂರಿ ಹಾಕಿ ವಿಶ್ವಾಸ ದ್ರೋಹ ಎಸಗಿದ್ದಾರೆಂದು ಆರೋಪಿಸಿದರು. ಕೈಮಗ್ಗದ ನಿಗಮದ ಮಾಜಿ ಅಧ್ಯಕ್ಷ ಹಾಗೂ ಕೆಜೆಪಿ ರಾಜ್ಯ ಕಾರ್ಯಾಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ ಮಾತನಾಡಿದರು. ಪ್ರಾಸ್ತಾವಿಕವಾಗಿ ಕೆಜೆಪಿ ಮುಖಂಡ ತಿಮ್ಮನಗೌಡ ಗುಡದೂರು, ಕೇಂದ್ರದ ಮಾಜಿ ಸಚಿವ ಹಾಗೂ ಕೆಜೆಪಿ ರಾಜ್ಯ ಉಪಾಧ್ಯಕ್ಷ ಬಸವರಾಜ ಪಾಟೀಲ್ ಆನ್ವರಿ ಮಾತನಾಡಿದರು. ಮಸ್ಕಿಯ ನಿಯೋಜಿತ ಅಭ್ಯರ್ಥಿ ಮಹದೇವಪ್ಪಗೌಡ ಪೊಲೀಸ್ ಪಾಟೀಲ್, ಸಿಂಧನೂರಿನ ನಿಯೋಜಿತ ಅಭ್ಯರ್ಥಿ ರಾಜಶೇಖರ ಪಾಟೀಲ್, ಶಿವರಾಜ ಗುಂಜಳ್ಳಿ, ವೀರನಗೌಡ ಕಾರಲಕುಂಟೆ, ಮಸ್ಕಿ ಕೆಜೆಪಿ ಸಂಚಾಲಕ ಬಸಣ್ಣ ತೊಂತನಾಳ, ಮಲ್ಲಪ್ಪ ಉದ್ಬಾಳ, ಶಿವಶಂಕೆಪ್ಪ ಹಳ್ಳಿ, ಯಮನಪ್ಪ ದೇವರಡ್ಡಿ, ಮಾನಪ್ಪ ಇದ್ದರು.
ಸೇರ್ಪಡೆ: ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ  ಗ್ರಾಮಗಳಿಂದ ಆಗಮಿಸಿದ್ದ ನೂರಾರು ಕಾರ್ಯಕರ್ತರು ಸಿ.ಎಂ. ಉದಾಸಿ ಹಾಗೂ ಎಂ.ಡಿ. ಲಕ್ಷ್ಮೀನಾರಾಯಣ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement