ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಲಿಂಗಸ್ಗೂರು; ಪತ್ರಕರ್ತರಿಂದ ಮನವಿ

Lingaraj Badiger
Updated On : 23 Mar 2013, 10:46 am

ಲಿಂಗಸ್ಗೂರು: ರಾಯಚೂರಿನ ಇನ್ ಚಾನೆಲ್ ವರದಿಗಾರ ಉಪೇಂದ್ರ ಕೇಶವರಾವ್ ಅವರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶುಕ್ರವಾರ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
  ಪತ್ರಕರ್ತರ ಸಂಘದ ಅಧ್ಯಕ್ಷ ಪಂಪಯ್ಯಮಠ, ಕಾರ್ಯದರ್ಶಿ ಸಿದ್ದನಗೌಡ ಪಾಟೀಲ, ಖಜಾಂಚಿ ಅಮರೇಶಸ್ವಾಮಿ ಬಲ್ಲಟಗಿ, ಉಪಾಧ್ಯಕ್ಷ ನಾಗರಾಜ ಮಸ್ಕಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಗುರುರಾಜ ಮುತಾಲಿಕ್, ಬಿ.ಎ. ನಂದಿಕೋಲಮಠ, ಘನಮಠದಯ್ಯ ಸಂತೆಕೆಲ್ಲೂರ, ಪತ್ರಕರ್ತರಾದ ದೇವಪ್ಪ ರಾಠೋಡ, ಅನಂತರಾವ್ ದೇಶಪಾಂಡೆ, ಸೋಮಣ್ಣ ಗುರಿಕಾರ, ಶಿವರಾಜ ಸುಂಕದ,  ಮೋನುದ್ದಿನ್ ಭಂಡಾರಿ, ದೇವಣ್ಣ ಕೋಡಿಹಾಳ, ಅಮಜದ ಕಂದಗಲ್, ಮಲ್ಲೇಶ ಗುರುಗುಂಟಾ, ಶರಣಯ್ಯ ಒಡೆಯರ್, ಲಕ್ಷ್ಮಣ ಬಾರಿಕೇರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement