ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಶರಣ ಸಂಸ್ಕೃತಿ ಮಹಾಯಾತ್ರೆಗೆ ಸ್ವಾಗತ

Lingaraj Badiger
Updated On : 23 Mar 2013, 10:37 am

ಕನ್ನಡಪ್ರಭ ವಾರ್ತೆ ಸಿಂಧನೂರು ಮಾ.22
ಕನ್ನಡ ಸಂಸ್ಕೃತಿ ಇಲಾಖೆ, ಬಸವ ಸಮಿತಿ ಮತ್ತು ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಬಸವ ಜಯಂತಿ ಶತಮಾನೋತ್ಸವ ನಿಮಿತ್ತ ಹಮ್ಮಿಕೊಂಡ ಶರಣ ಸಂಸ್ಕೃತಿ ಮಹಾಯಾತ್ರೆ ನಗರಕ್ಕೆ ಆಗಮಿಸುತ್ತಿರುದ್ದಂತೆ ವಿವಿಧ ಸಂಘಟನೆಗಳು ಅದ್ಧೂರಿಯಾಗಿ ಸ್ವಾಗತಿಸಿದವು.
ಕೋಟೆ ಬಸವಕಲ್ಯಾಣ ಮಂಟಪದಲ್ಲಿ ಮಹಾಯಾತ್ರೆ ಆಗಮನಕ್ಕಾಗಿ ಕಾಯ್ದು ಕುಳಿತು ಬಸವಾಭಿಮಾನಿಗಳು, ರುದ್ರಗೌಡ ಪೆಟ್ರೋಲ್ ಬಂಕ್ ಯಾತ್ರೆಯ ವಾಹನಗಳು ಆಗಮಿಸಿದ ತಕ್ಷಣ ಬಸವಣ್ಣ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಬರಮಾಡಿಕೊಂಡರು.
ನಂತರ ಮೆರವಣಿಗೆ ಆರ್.ಜಿ.ರಸ್ತೆ ಮೂಲಕ ಇಂದಿರಾ ಸರ್ಕಲ್, ಚನ್ನಮ್ಮ ಸರ್ಕಲ್, ಗಾಂಧಿವೃತ್ತದ ಮೂಲಕ ಬಸವ ವೃತ್ತಕ್ಕೆ ತೆರಳಿತು. ಅಲ್ಲಿ ಬಸವೇಶ್ವರ ಪ್ರತಿಮೆಗೆ ಹೂಮಾಲೆ ತದನಂತರ ಬಸವ ಪ್ರಸಾದ ನಿಲಯಕ್ಕೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.
ಮೆರವಣಿಗೆಯಲ್ಲಿ ಬಸವ ಸಮಿತಿ ರಾಜ್ಯಾಧ್ಯಕ್ಷ ಅಶೋಕ ಗದ್ರಟಗಿ, ಬಸವ ಕೇಂದ್ರದ ಗುಂಡಪ್ಪ ಬಳಿಗಾರ, ಬಸವಯುವ ಕೇಂದ್ರದ ಅಧ್ಯಕ್ಷ ಶೇಖರ ಯರದಿಹಾಳ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ರಮಾದೇವಿ ಶಂಭೋಜಿ, ಬಸವ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ, ಪದಾಧಿಕಾರಿಗಳು, ಬಸವಯೋಗ ಸಮಿತಿ ಅಧ್ಯಕ್ಷ ಶಿವಣ್ಣ ಹ. ಸಣ್ಣಪ್ಪನವರ್, ಮೇದಾರ ಕೇತೇಶ್ವರ ಸಮಾಜದ ಮುಖಂಡ ಜಗದೀಶ ಮೇದಾರ, ಹುಲುಗಪ್ಪ ಮೇದಾರ, ಹರಳಯ್ಯ ಸಮಾಜ, ಮಾದಾರ ಚನ್ನಯ್ಯ ಸಮಾಜ, ಹಡಪದ ಅಪ್ಪಣ್ಣ ಬಳಗ, ಛಲವಾದಿ ಸಮಾಜ ಬಳಗ, ರೈತ ಮುಖಂಡ ಹನುಮನಗೌಡ ಬೆಳಗುರ್ಕಿ, ಬಿಎಸ್ಪಿ ಮುಖಂಡ ಕೆ.ಮರಿಯಪ್ಪ, ಬಿಜೆಪಿ ತಾಲೂಕಾಧ್ಯಕ್ಷ ಅಮರೇಗೌಡ ವಿರುಪಾಪುರ, ನಗರಸಭೆ ಮಾಜಿ ಅಧ್ಯಕ್ಷ ಕೆ.ಶರಣಪ್ಪ ಟೆಂಗಿನಕಾಯಿ, ಮಾಜಿ ಸದಸ್ಯ ಎಸ್.ಶರಣೇಗೌಡ, ಮುಖಂಡರಾದ ವೀರಭದ್ರಪ್ಪ ಕುರಕುಂದಿ, ಸಿದ್ರಾಮಪ್ಪ ಮಾಡಶಿರವಾರ, ಬಾಬುಗೌಡ ಬಾದರ್ಲಿ, ಚಂದ್ರಭೂಪಾಲ ನಾಡಗೌಡ, ವೆಂಕನಗೌಡ ಗದ್ರಟಗಿ, ಹಾಜಿಮಸ್ತಾನ್, ಅಭಿಷೇಕ್ ನಾಡಗೌಡ, ಮಲ್ಲನಗೌಡ ಕಾನಿಹಾಳ, ತಿಮ್ಮನಗೌಡ ಚಿಲ್ಕರಾಗಿ, ಶಿವಕುಮಾರ ಜವಳಿ, ಮಹಿಳಾ ಬಸವ ಕೇಂದ್ರ ಜಿ.ಜೆ.ದೇವೀರಮ್ಮ, ಸರಸ್ವತಿ ಪಾಟೀಲ್, ಸಿದ್ದೇಶ್ವರಿ, ಚಂದ್ರಕಲಾ, ವಚನಗೀತಾ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement