ಸಹಕಾರಿ ಸಂಘಗಳ ಕಾಯ್ದೆ ತಿದ್ದುಪಡಿ; ಸೂಚನೆ
ರಾಯಚೂರು: ಕರ್ನಾಟಕ ಸಹಕಾರ ಸಂಘಗಳ ಕಾಯಿದೆ 1959, 2012ಕ್ಕೆ ಕರ್ನಾಟಕ ಸೌಹಾರ್ದ ಸಹಕಾರಿಗಳ ಅಧಿನಿಯಮ 1997ಕ್ಕೆ ತಿದ್ದುಪಡಿ ಮಾಡಿದ ಹಿನ್ನೆಲೆ ಎಲ್ಲ ಸಹಕಾರಿ ಸಂಘಗಳ ಹಾಗೂ ಸೌಹಾರ್ದ ಸಹಕಾರಿಗಳು ಫೆ. 11ರಿಂದ 90 ದಿನಗಳೊಳಗೆ ವಿಶೇಷ ಸರ್ವ ಸದಸ್ಯರ ಸಭೆ ಕರೆದು ತಿದ್ದುಪಡಿ ಅಳವಡಿಸಿಕೊಳ್ಳಲು ಸೂಚಿಸಲಾಗಿದೆ.
ತಪ್ಪಿದಲ್ಲಿ ಸಂಬಂಧಿಸಿದ ಆಡಳಿತ ಮಂಡಳಿ ಜವಾಬ್ದಾರಿಯಾಗುತ್ತದೆ ಎಂದು ಸಹಕಾರಿಗಳ ಉಪನಿಬಂಧಕ ಎಸ್.ಎಚ್. ಸಂತೋಷ ಕುಮಾರ ತಿಳಿಸಿದ್ದಾರೆ.