ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಾಮೂಹಿಕ ಮದುವೆ ಭಾಗ್ಯವಂತರದ್ದು

Lingaraj Badiger
Updated On : 23 Mar 2013, 10:36 am

ಕನ್ನಡಪ್ರಭ ವಾರ್ತೆ ಸಿಂಧನೂರು ಮಾ.22
ತ್ರಿಕಾಲಜ್ಞಾನಿ ಉಟಕನೂರಿನ ಬಸವಲಿಂಗ ಸ್ವಾಮಿಗಳು ಪಾದವಿಟ್ಟ ಈ ಗ್ರಾಮ ನಿಜಕ್ಕೂ ಪಾವನವಾದುದು. ಸಣ್ಣ ಪುಟ್ಟ ಘಟನೆಗಳಿಗೆ ವಾದ ಮಾಡುವ ಈ ಊರಲ್ಲಿ ಪ್ರತಿ ವರ್ಷ ನಡೆಯುವ ಸಾಮೂಹಿಕ ವಿವಾಹಗಳು ನಡೆಯುವುದು ಪವಾಡವೇ ಸರಿ. ಮಠಾಧೀಶರ ಸಮ್ಮುಖದಲ್ಲಿ ನಡೆಯವ ಸಾಮೂಹಿಕ ಮದುವೆಗಳು ಬಡವರ ಮದುವೆಗಳಲ್ಲ, ಭಾಗ್ಯವಂತರ ಮದುವೆಗಳು ಎಂದು ರೌಡಕುಂದ ಸಂಸ್ಥಾನಮಠದ ಮರಿಸಿದ್ದಲಿಂಗ ಶಿವಾಚಾರ್ಯರು ಹೇಳಿದರು.
ತಾಲೂಕಿನ ಗೌಡನಭಾವಿ ಗ್ರಾಮದಲ್ಲಿ ಶುಕ್ರವಾರ ನಡೆದ 65 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಈ ಕಾರ್ಯಕ್ರಮದ ಸಂಕಲ್ಪ ಕರ್ತೃ ನಾಗಪ್ಪ ತಾತನವರ ಸಾಮಾಜಿಕ ಕಳಕಳಿ ನಿಜಕ್ಕೂ ಲಿಂಗೈಕ್ಯ ಬಸವಲಿಂಗ ಸ್ವಾಮಿಗಳಿಗೆ ಪ್ರೀಯವಾದುದು. ತಾವು ಅವರ ಪ್ರೀತಿಗೆ ಮೆಚ್ಚಿದ್ದೇವೆ. ಸದಾ ಇಂತಹ ಕಾರ್ಯಕ್ರಮಗಳು ನಡೆಯಲಿ ಎಂದು ಹಾರೈಸಿದರು.
ಜನಮೆಚ್ಚುಗೆ: ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ, ಈ ಗ್ರಾಮದಲ್ಲಿ ಸಾಮೂಹಿಕ ಮದುವೆಗಳು ಶಿಸ್ತುಬದ್ಧವಾಗಿ ನಡೆದು ಜನಮೆಚ್ಚುಗೆ ಪಡೆದಿವೆ. ಅಂತೆಯೇ ಈ ಊರಿನ ಜನರು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದರೆ ಸುಧಾರಣೆಯಾಗಲು ಸಾಧ್ಯವಿದೆ. ಇಂತ ಜನರೊಂದಿಗೆ ಪ್ರತಿ ವರ್ಷ ನೂರಾರು ಸಾಮೂಹಿಕ ವಿವಾಹಗಳನ್ನು ಮಾಡುತ್ತಿರುವ ನಾಗಪ್ಪ ತಾತನವರ ಶ್ರಮ ನಿಜಕ್ಕೂ ಶ್ಲಾಘನೀಯ ಎಂದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಗ್ರಾಮದ ಜನರು ಒಗ್ಗಟ್ಟಿನಿಂದ ಯಾರನ್ನೂ ಪಟ್ಟಿ(ಸಹಾಯ) ಕೇಳದೆ ಮಾಡುವ ಸಾಮೂಹಿಕ ವಿವಾಹಗಳು ನಿಜಕ್ಕೂ ಮೆಚ್ಚುವಂತಹ ವಿಷಯ. ಅಧಿಕಾರ, ಹಣಗಳಿಕೆ, ಮತ್ತು ದೊಡ್ಡಸ್ಥಿಕೆಗಾಗಿ ಇಲ್ಲಿ ಕದನಗಳಾಗುತ್ತಿವೆ. ಈ ಎಲ್ಲ ಸವಲತ್ತು ಸಿಗಬೇಕಾದರೆ ದೇವರ ದಯೆ ಬೇಕು. ದೇವರ ಆಶೀರ್ವಾದವಿದ್ದರೆ ಏನಾದರೂ ಆಗಬಹುದು. ಎಲ್ಲರೂ ಒಳ್ಳೆಯ ಕೆಲಸ ಮಾಡುತ್ತಾ ದೇವರ ದ್ಯಾನ ಮಾಡಿದರೆ ಜೀವನದಲ್ಲಿ ಒಳ್ಳೆಯದಾಗುತ್ತದೆ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಉಟಕನೂರಿನ ಮರಿಬಸವರಾಜ ದೇಶಿಕೇಂದ್ರ ಸ್ವಾಮೀಜಿ, ಬಾಳೇಹನ್ನೂರಿನ ಶಾಖಾ ಮಠ ಸಿಂಧನೂರಿನ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ಈ ವೇಳೆ ನಾಗಪ್ಪ ತಾತ, ಜಿಪಂ ಸದಸ್ಯೆ ಶಾಂತಮ್ಮ ದಯಾನಂದಗೌಡ, ತಾಪಂ ಮಾಜಿ ಅಧ್ಯಕ್ಷ ರಮೇಶಪ್ಪ ದಿದ್ದಿಗಿ, ಎಪಿಎಂಸಿ ಮಾಜಿ ಉಪಾಧ್ಯಕ್ಷ ತಿಮ್ಮಯ್ಯ ನಾಯಕ, ಜಿಪಂ ಮಾಜಿ ಉಪಾಧ್ಯಕ್ಷ ಎಂ.ದೊಡ್ಡಬಸವರಾಜ, ಕೆಜೆಪಿ ಮುಖಂಡರಾದ ತಿಮ್ಮನಗೌಡ ಗುಡದೂರು, ರಾಜಶೇಖರ ಪಾಟೀಲ್, ಮಹಾದೇವಪ್ಪಗೌಡ, ಬಿಜೆಪಿ ಮುಖಂಡ ಎನ್.ಶಿವನಗೌಡ ಗೊರೇಬಾಳ, ಶೇಖರಪ್ಪ ಮೇಟಿ ಹುಲ್ಲೂರು, ತಾಪಂ ಸದಸ್ಯ ಬಸವರಾಜ ಜೀನೂರು, ಅಜೇಯಕುಮಾರ ನಾಡಗೌಡ, ಬಿಎಸ್ಸಾರ್ ಮುಖಂಡ ಶೇಖರಪ್ಪ ತಳವಾರ, ವಸಗೇರಪ್ಪ ಪೂಜಾರಿ, ಜೆಡಿಎಸ್ ಮುಖಂಡರಾದ ಟಿ.ಹನುಮಂತಪ್ಪ, ರಾಜಾ ಸೋಮನಾಥ ನಾಯಕ್, ಸಿಡಿಪಿಓ ಹನಮಂತಪ್ಪ ಓಲೇಕಾರ, ಪಿಎಸ್‌ಐ ಮಲ್ಲಿಕಾರ್ಜುನ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement