ತೆನೆ ಹೊತ್ತವರು 'ಕೈ' ಹಿಡಿದರು...
ಸಿಂಧನೂರು: ತಾಲೂಕಿನ ಜವಳಗೇರಾ ಗ್ರಾಮದಲ್ಲಿ ಜೆಡಿಎಸ್ ಪಕ್ಷದ ಹಲವರು ಯುವ ಮುಖಂಡ ಬಾಬುಗೌಡ ಸಮ್ಮುಖದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಗೊಂಡರು.
ಮಲ್ಲನಗೌಡ, ಯಂಕಣ್ಣ, ಮರಿಯಪ್ಪ, ನಜೀರ್ಅಹ್ಮದ್, ವಿರುಪಣ್ಣ, ಯಂಕಪ್ಪ ಇವರ ನೇತೃತ್ವದಲ್ಲಿ ರಫಿ ಅಹ್ಮದ್, ಮೌಲಾಸಾಬ ಕಡೆಮನಿ, ಆದಿಲ್ ಪಾಷಾ, ಸಿರಾಜ್ ಸಾಬ, ವೀರೇಶ ಗೌಡ, ವೆಂಕಟೇಶ ಪೂಜಾರಿ, ಅಚ್ಚಳ್ಳಿ, ಮುದುಕಪ್ಪ ಹುನಗುಂಡ, ದುರುಗಪ್ಪ, ವೀರೇಶ, ಗೋವಿಂದ ದಾಸರ, ನಾಗಪ್ಪ ನಂದಿಹಾಳ, ಸಣ್ಣಅಯ್ಯಪ್ಪ ನಾಯಕ ಸೇರಿದಂತೆ 70ಕ್ಕೂ ಹೆಚ್ಚು ಜನರು ಕಾಂಗ್ರೆಸ್ಗೆ ಸೇರ್ಪಡೆಗೊಂಡರು.
ನಂತರ ಬಾಬುಗೌಡ ಮಾತನಾಡಿ, ವಿಧಾನಸಭೆ ಚುನಾವಣೆ ಸಮೀಪಿಸಿದ್ದು ಶಾಂತಿ, ಸೌಹಾರ್ದತೆಯಿಂದ ಎದುರಿಸುವ ಮೂಲಕ ಹಂಪನಗೌಡರ ಗೆಲವಿಗೆ ಕಾರ್ಯಕರ್ತರು ಶ್ರಮಿಸಬೇಕು. ಎಂದು ಹೇಳಿದರು.