ಅಕ್ಷರ ಲೋಕದ ನಕ್ಷತ್ರ ಪ್ರಶಸ್ತಿಗೆ ಕೃತಿಗಳ ಆಯ್ಕೆ
ಗುರುಮಠಕಲ್: ಇಲ್ಲಿಯ ಸಿರಿಗನ್ನಡ ಪ್ರತಿಷ್ಠಾನ ಕೇಂದ್ರ ಸಂಘ ಗುರುಮಠಕಲ್ ರಾಜ್ಯಮಟ್ಟದಲ್ಲಿ ಕೊಡಮಾಡುವ 2012-13ನೇ ಸಾಲಿಗಾಗಿ ದಿ. ಕಿಶನ್ರಾವ್ ಮಹೇಂದ್ರಕರ ಸ್ಮರಣಾರ್ಥವಾಗಿ ಅಕ್ಷರ ಲೋಕದ ನಕ್ಷತ್ರ ಪ್ರಶಸ್ತಿಗೆ ಕೃತಿಗಳನ್ನು ಆಯ್ಕೆ ಮಾಡಲಾಗಿದೆ.
ತುಮಕೂರು ಜಿಲ್ಲೆಯ ವಿಜಯಾ ಮೋಹನ ಅವರ ಕಣ್ಣಿ ಕಥಾ ಸಂಕಲನ ಮತ್ತು ಸೇಡಂ ತಾಲೂಕಿನ ಬಿದರಿ ಚಂದ್ರಕಲಾ ಅವರ ಬೆಳ್ಳಿ ಚುಕ್ಕಿ ಜನಪದ ಗೀತೆಗಳು ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಈ ಕೃತಿಕಾರರಿಗೆ 5 ಸಾವಿರ ನಗದು, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುದು.
ದಶಮಾನೋತ್ಸವ ಗೌರವ ಪ್ರಶಸ್ತಿಗೆ ಗುಲ್ಬರ್ಗದ ಎ.ಕೆ.ರಾಮೇಶ್ವರ ಅವರ ಬಿಚ್ಚಿ ಮಾರ್ಯಾವ ಬಿಳಿ ಹೂವು ಜನಪದ ಗೀತೆಗಳ ಸಂಕಲನ, ಬಳ್ಳಾರಿ ಜಿಲ್ಲೆಯ ಶಿವರಾಮ್ ಆಸುಂಡಿಯವರತಳ ಸಂಸ್ಕೃತಿ ಸಂಶೋಧನ ಕೃತಿಗೆ, ಶಹಾಪುರ ತಾಲೂಕಿನ ಶಿವರಂಜನ್ ಸತ್ಯಂಪೇಟ ಅವರ ಒಂದು ಮುಂಜಾವು ಕೃತಿಗೆ, ಕೊಪ್ಪಳ ಜಿಲ್ಲೆಯ ಜಿ.ಎಚ್.ಪಾಟೀಲ್ ಅವರ ವಚನ ಸಿರಿ ಕೃತಿ, ಶಿವಮೊಗ್ಗ ಜಿಲ್ಲೆಯ ಲಕ್ಷ್ಮಣ ಕೊಡ್ಸೆ ಅವರ ಪಾಡು ಕಾದಂಬರಿ, ಯಾದಗಿರಿ ಜಿಲ್ಲೆಯ ಶ್ರೀಶೈಲ ಪೂಜಾರಿ ಅವರ ನಿತ್ಯ ಸತ್ಯ ಹನಿಗವನಗಳ ಸಂಕಲನ, ಗುಲ್ಬರ್ಗ ಜಿಲ್ಲೆಯ ಡಾ.ಎಸ್.ಎಸ್.ಗುಬ್ಬಿ ಅವರ ಚೈತನ್ಯ ಕವನ ಸಂಕಲನ, ಗದಗ ಜಿಲ್ಲೆಯ ಲಕ್ಷ್ಮೀ ಶಂಕರ ಜೋಶಿ ಅವರ ಗುಮ್ಮನ ಕರೆಯದಿರೆ ಲಲಿತ ಪ್ರಬಂಧಗಳ ಕೃತಿಯನ್ನು ಆಯ್ಕೆ ಮಾಡಲಾಗಿದೆ. ದಶಮಾನೋತ್ಸವದ ಗೌರವ ಪ್ರಶಸ್ತಿಗೆ ಆಯ್ಕೆಯಾದವರಿಗೆ ಪ್ರಶಸ್ತಿ ಫಲಕ, ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಗುವುದು. ಆಯ್ಕೆ ಸಮಿತಿ ಅಧ್ಯಕ್ಷ ಕೆ.ಮೊಗುಲಪ್ಪ ಅವರನ್ನೊಳಗೊಂಡ ಸಮಿತಿ ಆಯ್ಕೆ ಮಾಡಿದೆ ಎಂದು ಸಿರಿಗನ್ನಡ ಪ್ರತಿಷ್ಠಾನ ಕೇಂದ್ರ ಸಂಘದ ಅಧ್ಯಕ್ಷ ಶ್ರೀಧರ ಚಂಡರಕಿ ಹಾಗೂ ಕಾರ್ಯದರ್ಶಿ ಶರಣಪ್ಪ ಚಿನ್ನಾಕಾರ್ ತಿಳಿಸಿದ್ದಾರೆ.