ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಇಂದಿರಾ ಪ್ರಿಯದರ್ಶಿನಿ ಶಾಲೆ ವಿರುದ್ಧ ದೂರು

Rashmi Kasaragodu
Updated On : 25 Mar 2013, 11:26 am

ಸಿಂಧನೂರು: ನಗರದ ಇಂದಿರಾ ಪ್ರಿಯದರ್ಶಿನಿ ಪೂರ್ವ ಮತ್ತು ಪ್ರಾಥಮಿಕ ಶಾಲೆಯ ಮುಖ್ಯಸ್ಥರು ಶುಲ್ಕ ಕಟ್ಟಿಲ್ಲವೆಂದು ತನ್ನ ಮಕ್ಕಳಿಗೆ ಪರೀಕ್ಷೆಗೆ ಅವಕಾಶ ನೀಡದೇ ಹೊರಹಾಕಿದ್ದಾರೆ ಎಂದು ಆಪಾದಿಸಿ ಲಕ್ಷ್ಮಣ ರಾಠೋಡ ಎನ್ನುವವರು ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಂದಿರಾ ಪ್ರಿಯದರ್ಶಿನಿಯಲ್ಲಿ ತಮ್ಮ 3 ಜನ ಮಕ್ಕಳಾದ ಆದಿತ್ಯ ಎಲ್ಕೆಜಿ, ಅಭಿಷೇಕ 2ನೇ ತರಗತಿ ಮತ್ತು ಸರಳಾದೇವಿ 3ನೇ ತರಗತಿಯಲ್ಲಿ ಓದುತ್ತಿದ್ದಾರೆ. ಹಣ ಕಟ್ಟಿರುವ ಬಗ್ಗೆ ರಶೀದಿ ಕೊಡದೇ ಇನ್ನೂ ಶುಲ್ಕ ಕೊಡಬೇಕೆಂದು ಪರೀಕ್ಷೆಗೆ ಅವಕಾಶ ಕೊಡದೆ ಅನ್ಯಾಯ ಮಾಡುತ್ತಿದ್ದಾರೆ. ಕಾರಣ ತಮಗೆ ನ್ಯಾಯ ಒದಗಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement