ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕನಿಷ್ಠ ವೇತನ ನಿಗದಿಗೆ ಒತ್ತಾಯಿಸಿ ಮನವಿ

Rashmi Kasaragodu
Updated On : 25 Mar 2013, 11:25 am

ರಾಯಚೂರು: ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ ನಿಗದಿ ಮತ್ತು ಪ್ರತಿ ತಿಂಗಳು ಐದನೇ ತಾರೀಕಿನೊಳಗೆ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಬಿಸಿಯೂಟ ನೌಕರರ ಸಂಘದಿಂದ ಈಚೆಗೆ ಜಿಪಂ.ಗೆ ಮನವಿ ಸಲ್ಲಿಸಲಾಯಿತು.
ಜಿಪಂ ಸಿಇಒ ಅವರಿಗೆ ಮನವಿ ಸಲ್ಲಿಸಿದ ಸಂಘಟನೆಯ ಕಾರ್ಯಕರ್ತರು, ಕಳೆದ 11 ವರ್ಷಗಳಿಂದ ಬಿಸಿಯೂಟ ನೌಕರರಿಗೆ ಪ್ರತಿ ತಿಂಗಳು 1 ಸಾವಿರ ವೇತನದಲ್ಲಿ ದುಡಿಸಿಕೊಳ್ಳಲಾಗುತ್ತಿದೆ. ಇನ್ನು ಮುಂದೆ ಸರ್ಕಾರ ಪ್ರತಿ ತಿಂಗಳು 10 ಸಾವಿರ ವೇತನ ನಿಗದಿ ಮಾಡುವಂತೆ ಆಗ್ರಹಿಸಿದ್ದಾರೆ.
ಸದ್ಯ ಇಂಧನ ಬೆಲೆ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಕಾಣುತ್ತಿದ್ದು, ಕಾರ್ಮಿಕರ ವೇತನ ಮಾತ್ರ ಏರಿಕೆ ಕಂಡಿಲ್ಲ. ಅದರಿಂದ ನೌಕರರ ಕುಟುಂಬದ ಜೀವನ ನಿರ್ವಹಣೆ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಕನಿಷ್ಠ ವೇತನವನ್ನು 10 ಸಾವಿರ ನಿಗದಿ ಮಾಡುವಂತೆ ಒತ್ತಾಯಿಸಿದ್ದಾರೆ.
ಬಿಸಿಯೂಟ ನೌಕರರಿಗೆ ಕೆಲವೆಡೆ ಶಾಲೆಗಳ ಮುಖ್ಯಸ್ಥರು ಕೆಲಸದಿಂದ ವಿನಾ ಕಾರಣ ವಜಾಗೊಳಿಸಿದ್ದು, ಅಂಥವರನ್ನು ಪುನಾ ಕೆಲಸ್ಕೆ ತೆಗೆದುಕೊಳ್ಳುವಂತೆ ಆಗ್ರಹಿಸಿದ ಕಾರ್ಯಕರ್ತರು, ತಾಲೂಕಿನ ತುರುಕನಡೋಣಿ ಶಾಲೆಯಲ್ಲಿ ವಜಾಗೊಳಿಸಿದ ಬಿಸಿಯೂಟ ನೌಕರರನ್ನು ಪುನಾ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಇದುವರೆಗೆ ನೌಕರರಿಗೆ ತಡೆಹಿಡಿದ ವೇತನವನ್ನು ಕೂಡಲೇ ಬಿಡುಗಡೆಗೊಳಿಸಬೇಕು. ನೌಕರರ ಸೇವೆ ಕಾಯಂಗೊಳಿಸಬೇಕು. ಸೇವಾಭದ್ರತೆ ಕಲ್ಪಿಸುವಂತೆ ಹೋರಾಟಗಾರರು ಆಗ್ರಹಿಸಿದ್ದಾರೆ. ಸಂಘಟನೆಯ ಗೌರವಾಧ್ಯಕ್ಷ ವೈ.ಈರಣ್ಣ, ಅಧ್ಯಕ್ಷೆ ಕಲ್ಯಾಣಿ, ಅಕ್ಕಮ್ಮ, ನಾಗಮ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement