ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕೆಜೆಪಿ ಕಚೇರಿ ಉದ್ಘಾಟನೆ

Rashmi Kasaragodu
Updated On : 25 Mar 2013, 11:29 am

ಕನ್ನಡಪ್ರಭ ವಾರ್ತೆ  ಸಿಂಧನೂರು  ಮಾ.24
ಈಗಾಗಲೇ ಕರ್ನಾಟಕ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಸಿಂಧನೂರಿನ ನಿಯೋಜಿತ ಅಭ್ಯರ್ಥಿ ರಾಜಶೇಖರ ಪಾಟೀಲ್ ಎಂದು ಘೊಷಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ರಾಜಶೇಖರ ಪಾಟೀಲರು ಪ್ರಚಾರದಲ್ಲಿ ತೊಡಗಿದ್ದು ಅಧಿಕೃತವಾಗಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿದರು.
ರುದ್ರಗೌಡ ಪೆಟ್ರೋಲ್ ಬಂಕ್ ಎದುರು ಸುವ್ಯವಸ್ಥಿತವಾದ ಕಾರ್ಯಾಲಯ ಆರಂಭಿಸಿರುವ ಅವರು, ಭಾನುವಾರ ಸಂಜೆ ನಗರ ಮಟ್ಟದ ಕಾರ್ಯಕರ್ತರ ಸಭೆ ನಡೆಸಿದರು. ಸ್ವಾತಂತ್ರ್ಯ ಯೋಧರಾದ ಭಗತ್ಸಿಂಗ್, ಸುಖದೇವ್, ರಾಜಗುರು ಅವರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜಶೇಖರ ಪಾಟೀಲ್, ಕಾಂಗ್ರೆಸ್ ಗಾಳಿಗೆ ಕೆಜೆಪಿ ಹಾರಿ ಹೋಗುತ್ತದೆ ಎಂದು ಆ ಪಕ್ಷದ ಮುಖಂಡರು ಪ್ರಚಾರಕ್ಕೆ ಹೋದ ಕಡೆಗಳಲ್ಲಿ ಹೇಳುತ್ತಿರುವುದು ಗಮನಕ್ಕೆ ಬಂದಿದೆ. ಯಾರು ಗಾಳಿಗೆ ಹೋಗುತ್ತಾರೆ ಎಂಬುದನ್ನು ಮತದಾರರು ನಿರ್ಧರಿಸುತ್ತಾರೆ. ಕಾರ್ಯಕರ್ತರು ಅವರ ಮಾತುಗಳನ್ನು ಸವಾಲಾಗಿ ಸ್ವೀಕರಿಸಿ ಕಾಂಗ್ರೆಸ್ನ ಧೂಳೀಪಟ ಮಾಡುವ ಮೂಲಕ ಕೆಜೆಪಿ ಬಾವುಟವನ್ನು ಸಿಂಧನೂರು ಕ್ಷೇತ್ರದಲ್ಲಿ ಹಾರಿಸಬೇಕಾದ ಜವಾಬ್ದಾರಿಯನ್ನು ಒತ್ತಿ ಹೇಳಿದರು.
ಡಾ. ಚನ್ನನಗೌಡ ಪಾಟೀಲ್, ಬೆನ್ನೂರು ಶರಣೇಗೌಡ, ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ ಪಾಟೀಲ್, ಹಾಜಿಮಸ್ತಾನ್, ಲಿಂಗರಾಜ ಹೂಗಾರ, ಶಾರದಾ ಜಗದೀಶ, ಮುಖಂಡರಾದ ಜಗದೀಶ ಮ್ಯಾದಾರ್, ಶರಣಯ್ಯ ಹಿರೇಮಠ, ಎಂ.ಡಿ. ನದೀಮ್ಮುಲ್ಲಾ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement