ಬೆಂಕಿ ತಾತಾ ಜಾತ್ರೆಗೆ ನಂದಿಕೋಲ ಮೆರವಣಿಗೆ
ಕ.ಪ್ರ. ವಾರ್ತೆ ಗುಲ್ಬರ್ಗ/ಶಹಾಬಾದ್ ಮಾ.24
ಶಹಾಬಾದ್ ನಗರದ ಬಳಿಯ ನಿಜಾಮ ಬಜಾರ ಪ್ರದೇಶದ ಸದ್ಗುರು ಸದಾಶಿವ ಬೆಂಕಿ ತಾತಾ ಮಠದಿಂದ ಜೇವರ್ಗಿ ತಾಲೂಕಿನ ಯನಗುಂಟಿ ಬೆಂಕಿ ತಾತಾ ಮಠಕ್ಕೆ ಪಲ್ಲಕ್ಕಿ ಹಾಗೂ ನಂದಿಕೋಲನ್ನು ಮೆರವಣಿಗೆ ಮೂಲಕ ಒಯ್ಯಲಾಯಿತು.
ಬೆಳಗ್ಗೆ ಸ್ಥಳೀಯ ಕತೃ ಪಾದುಕೆಗೆ ವಿಶೇಷ ಪೂಜೆ ನಡೆಯಿತು. ಗೋಳಾ(ಕೆ) ಗ್ರಾಮದ ಶಂಭುಲಿಂಗ ಸಾಹು ಅವರ ಮನೆಯಿಂದ ನಂದಿಕೋಲನ್ನು ತರಲಾಯಿತು. ಜಂಗಮರ ಪ್ರಸಾದ ನಂತರ ಬೆಂಕಿ ತಾತಾ ಉತ್ಸವ ಮೂರ್ತಿ, ಪಾದುಕೆಗಳುಳ್ಳ ಪಲ್ಲಕ್ಕಿ, ನಂದಿಕೋಲನ್ನು ಮಂಗಲಸಿಂಗ್ ತಾತಾ ನೇತೃತ್ವದಲ್ಲಿ ಪುರವಂತರ ಆಟದೊಂದಿಗೆ ಯನಗುಂಟಿಗೆ ಪಾದಯಾತ್ರೆ ಮೂಲಕ ಕೊಂಡೊಯ್ಯಲಾಯಿತು. ಶಹಾಬಾದ್, ಗೋಳಾ(ಕೆ) ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.