ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವಿಶ್ವ ರಂಗಭೂಮಿ ದಿನ: ಇಂದಿನಿಂದ ನಾಟಕ ಪ್ರದರ್ಶನ

Rashmi Kasaragodu
Updated On : 25 Mar 2013, 11:26 am

ರಾಯಚೂರು: ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ನಗರದಲ್ಲಿ ಮಾ. 25ರಿಂದ ಮೂರು ದಿನಗಳ ಕಾಲ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ಕಲಾವಿದ ಅಲ್ತಾಫ್ ರಂಗಮಿತ್ರ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ರಂಗಮಂದಿರದಲ್ಲಿ ಮಾ. 25ರಿಂದ ಮೂರು ದಿನಗಳ ಕಾಲ ನಡೆಯುವ ನಾಟಕ ಪ್ರದರ್ಶನದಲ್ಲಿ ಮಾ. 25ರಂದು ಚಿನ್ನದ ಬೊಂಬೆ, ಮಾ. 26ರಂದು ಕರ್ತವ್ಯದ ಕಾಣಿಕೆ, ಮಾ. 27ರಂದು ನಿಮ್ಮ ಹೆಂಡತಿ ನಾನಲ್ಲ ಎಂಬ ನಾಟಕ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ನಡೆಯಲಿರುವ ಈ ನಾಟಕ ಪ್ರದರ್ಶನದಲ್ಲಿ ಗ್ರಾಮೀಣ ಕಲಾ ತಂಡದಿಂದ 2 ಹಾಗೂ ಅಲ್ತಾಫ್ ರಂಗಮಿತ್ರ ತಂಡದ ಒಂದು ನಾಟಕ ಪ್ರದರ್ಶಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಮೈಸೂರು ರಂಗಾಯಣದ ನಿರ್ದೇಶಕ ರಾಜಾರಾಂ ಅವರನ್ನು ಪದಮುಕ್ತಗೊಳಿಸಿದ್ದು ಸರಿಯಾದ ಕ್ರಮವಲ್ಲ. ನಾಟಕ ಪ್ರದರ್ಶನದ ಉದ್ಘಾಟನೆ ಸಮಾರಂಭದಲ್ಲಿ ರಾಜಕೀಯ ನಾಯಕರು ನೀತಿ ಸಂಹಿತೆಯ ಜಾರಿಯಲ್ಲಿರುವ ಹಿನ್ನೆಲೆ ಪಾಲ್ಗೊಳ್ಳುತ್ತಿಲ್ಲ ಎಂದು ಹೇಳಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement