'ಸಿಪಿಐ(ಎಂಎಲ್) ಜನಶಕ್ತಿ ಸ್ಪರ್ಧೆ ಖಚಿತ'
ರಾಯಚೂರು: ಪ್ರಸಕ್ತ ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ರಾಯಚೂರು ನಗರ ಕ್ಷೇತ್ರದಿಂದ ಸಿಪಿಐ(ಎಂಎಲ್) ಜನಶಕ್ತಿ ಪಕ್ಷದಿಂದ ವಿ.ಎಚ್. ಮಾಸ್ತರ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ.
ಈ ಕುರಿತು ಪ್ರಕಟಣೆ ನೀಡಿರುವ ಪಕ್ಷವು ಇತ್ತೀಚೆಗೆ ಸಭೆ ನಡೆಸಿ ವಿ.ಎಚ್. ಮಾಸ್ತರ್ ಅವರನ್ನು ಕಣಕ್ಕಿಳಿಸಲು ನಿರ್ಣಯ ಕೈಗೊಂಡಿದೆ. ಅದೇ ರೀತಿ ನಗರದ ನಾಗರಿಕರಿಗೆ ಸಕಾಲಕ್ಕೆ ಶುದ್ಧ ನೀರು ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ತುರ್ತಾಗಿ ನಾಗರಿಕರಿಗೆ ನೀರು ಮತ್ತು ತಡೆ ರಹಿತ ವಿದ್ಯುತ್ ಒದಗಿಸಲು ಸಭೆಯಲ್ಲಿ ಒತ್ತಾಯಿಸಲಾಯಿತು.
ವರದಿಗಾರ ಉಪೇಂದ್ರ ಮೇಲೆ ದುಷ್ಕರ್ಮಿಗಳು ನಡೆಸಿದ ಹಲ್ಲೆ ಘಟನೆಯನ್ನು ಪಕ್ಷವು ತೀವ್ರವಾಗಿ ಖಂಡಿಸಿದ್ದು, ಹಲ್ಲೆಕೋರರ ಬಂಧನ ಮತ್ತು ಕ್ರಮಕ್ಕೆ ಒತ್ತಾಯಿಸಿದೆ. ಚುನಾವಣೆ ಘೋಷಣೆಯಾದ ನಂತರ ಮತದಾರರಿಗೆ ಸಮರ್ಪಕ ಮಾಹಿತಿ ನೀಡುವಲ್ಲಿ ತಹಸೀಲ್ದಾರ್ ಕಚೇರಿ ವಿಫಲವಾಗಿದೆ ಎಂದು ಪಕ್ಷ ದೂರಿದೆ.