ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಏ.1ರ ಮುಷ್ಕರಕ್ಕೆ ಲಾರಿ-ಟಿಪ್ಪರ್ ಮಾಲೀಕರ ಸಂಘ ಬೆಂಬಲ

Rashmi Kasaragodu
Updated On : 26 Mar 2013, 11:04 am

ಕನ್ನಡಪ್ರಭ ವಾರ್ತೆ ಟಿ ಗುಲ್ಬರ್ಗ ಟಿ ಮಾ.25
ಕೇಂದ್ರ ಸರ್ಕಾರ ಲಾರಿ ಇನ್ನಿತರ ವಾಹನಗಳಿಗೆ ಥರ್ಡ್ ಪಾರ್ಟಿ ವಿಮಾ ಮಾಡಿಸುವ ಶುಲ್ಕವನ್ನು ಶೇ.107ರಷ್ಟು ಹೆಚ್ಚಳ ಮಾಡಿರುವುದನ್ನು ಖಂಡಿಸಿ ಲಾರಿ ಮಾಲೀಕರು ಏ.1ರಿಂದ ನಡೆಸಲಿರುವ ಲಾರಿ ಮುಷ್ಕರಕ್ಕೆ ಜಿಲ್ಲಾ ಮರಳು ಸಾಗಣೆ ಲಾರಿ-ಟಿಪ್ಪರ್ ಮಾಲೀಕರ ಸಂಘ ಬೆಂಬಲ ವ್ಯಕ್ತಪಡಿಸಿದೆ.
ಈ ಕುರಿತು ಸಂಘದ ಅಧ್ಯಕ್ಷ ವೆಂಕನಗೌಡ ಅಲ್ಲೂರ, ಮುಖಂಡರಾದ ಮಲ್ಲಿನಾಥ ಹಾಗರಗಿ, ಎಸ್.ಬಿ. ಹಾಗರಗಿ, ಬಿ.ವಿ. ರವಿಕುಮಾರ, ರಾಮಯ್ಯ ಜನಿವಾರ, ಮಹ್ಮದ್ ಜಿಲಾನಿ ಮೊದಲಾದವರು ಜಂಟಿಯಾಗಿ ಹೇಳಿಕೆ ನೀಡಿ, ವಿಮಾ ಶುಲ್ಕವನ್ನು ಅತಿಯಾಗಿ ಹೆಚ್ಚಳ ಮಾಡಿದ್ದನ್ನು ಬಲವಾಗಿ ಖಂಡಿಸಿದ್ದಾರೆ.
ರಾಜ್ಯದಲ್ಲಿ ಮರಳು ನೀತಿ ಸರಿಯಾಗಿ ಜಾರಿಯಾಗದೆ ಲಾರಿ ಮತ್ತು ಟಿಪ್ಪರ್ಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಿರುವಾಗ ಇಷ್ಟೊಂದು ಪ್ರಮಾಣದಲ್ಲಿ ವಿಮಾ ಕಂತನ್ನು ಹೆಚ್ಚಿಸಿದ್ದು ಸರಿಯಲ್ಲ. ಕೂಡಲೇ ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement