ಪದಾಧಿಕಾರಿಗಳ ನೇಮಕ
ಮಸ್ಕಿ: ಕನ್ನಡ ಸಾಹಿತ್ಯ ಪರಿಷತ್ತಿನ ಇಲ್ಲಿನ ಘಟಕದ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೆ ನೇಮಕ ಮಾಡಲಾಗಿದೆ. ಗೌರವಾಧ್ಯಕ್ಷರಾಗಿ ಸಾಹಿತಿ ಗುಂಡಯ್ಯ ಶೆಟ್ಟಿ, ಗೌರವ ಸಲಹೆಗಾರರಾಗಿ ಪತ್ರಕರ್ತ ಉಮೇಶ್ವರಯ್ಯ ಬಿದನೂರಮಠ, ದಯಾನಂದ ಜೋಗಿನ್, ಅಧ್ಯಕ್ಷರಾಗಿ ಗುಂಡುರಾವ್ ದೇಸಾಯಿ, ಗೌರವ ಕಾರ್ಯದರ್ಶಿಗಳಾಗಿ ಉಪನ್ಯಾಸಕ ಪ್ರಭು ಸಾಲಿಮಠ, ಶ್ರೀಧರ ಬೊಳ್ಳೊಳ್ಳಿ, ಕೋಶಾಧ್ಯಕ್ಷರಾಗಿ ವಿನೋದ ಹಳ್ಳಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರೀನಿವಾಸ ವಿ., ಅಡವೀಶ ಬುಳ್ಳಾ, ಆನಂದ ಪತ್ತಾರ, ಪರಶುರಾಮ ಕೋಡಗುಂಟಿ, ದೇವೇಂದ್ರ ನಾಯಕ, ಮಹಿಳಾ ಪ್ರತಿನಿಧಿ ವಿಜಯಲಕ್ಷ್ಮೀ ಅವರನ್ನು ನೇಮಿಸಲಾಗಿದೆ.