ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಿ. ಗಣೇಕಲ್ ಗ್ರಾಪಂ.ನಲ್ಲಿ ಅಕ್ರಮ

Rashmi Kasaragodu
Updated On : 26 Mar 2013, 11:01 am

ದೇವದುರ್ಗ: ತಾಲೂಕಿನ ಬಿ. ಗಣೇಕಲ್ ಗ್ರಾಪಂ ವ್ಯಾಪ್ತಿಯಲ್ಲಿ ವಸತಿ ಯೋಜನೆ ಮನೆಗಳ ಚೆಕ್ ನೀಡಲು ಹಣ ಪಡೆಯುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕದ ಅಧ್ಯಕ್ಷ ರಾಮನಗೌಡ ದೊಂಡಂಬಳಿ ಆರೋಪಿಸಿದರು.
ಬಿ. ಗಣೇಕಲ್ ಗ್ರಾಪಂ ಮುಂದೆ ಸೋಮವಾರ ನಡೆಸಿದ ಧರಣಿಯಲ್ಲಿ ಮಾತನಾಡಿ, ಬಿ.ಗಣೇಕಲ್ ಗ್ರಾಪಂ.ಗೆ ಬಸವ, ಇಂದಿರಾ ಆವಾಸ್ ಯೋಜನೆಗಳಲ್ಲಿ ಮನೆಗಳು ಮಂಜೂರಾಗಿದ್ದು ವಸತಿ ಯೋಜನೆ ಅಡಿಯಲ್ಲಿ ಆಯ್ಕೆಯಾದ ಪ್ರತಿ ಫಲಾನುಭವಿಗಳಲ್ಲಿ ಗ್ರಾಪಂ ಸಿಬ್ಬಂದಿ ಜನರಿಂದ ಸಾವಿರಾರು ಹಣ ಪಡೆದು ಚೆಕ್ಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಸಿಬ್ಬಂದಿ ತಾವು ಸಂಗ್ರಹಿಸಿದ ಹಣದ ಬಗ್ಗೆ ಸಮಗ್ರ ಮಾಹಿತಿ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ರೈತರಿಂದ ಪಡೆದ ಹಣದ ಬಗ್ಗೆ ವಿವರಣೆ ನೀಡದಿದ್ದಲ್ಲಿ ಹೋರಾಟ ಮಾಡಲಾಗುವುದೆಂದು ಅವರು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ಗ್ರಾಮ ಘಟಕದ ಕಾರ್ಯದರ್ಶಿ ಮಲ್ಲಯ್ಯ, ಮುಖಂಡರಾದ ಬಸವರಾಜ, ಚಿದಾನಂದ, ಖಾಸಿಂ ಅಲಿ ಸೇರಿ ನೂರಾರು ರೈತರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement