ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಹಿಳಾ ದಿನಾಚರಣೆ: ಸಾಧಕರಿಗೆ ಸನ್ಮಾನ

Rashmi Kasaragodu
Updated On : 26 Mar 2013, 11:03 am

ರಾಯಚೂರು: ನಗರದ ಟಾಗೋರ್ ಬಿ.ಇಡಿ ಕಾಲೇಜಿನಲ್ಲಿ ಇತ್ತೀಚೆಗೆ ಜೇಸಿಐ ಸಂಸ್ಥೆಯಿಂದ ಮಹಿಳಾ ದಿನಾಚರಣೆ ಸಮಾರಂಭ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಚಾರ್ಯ ಆಶಾ ಪ್ರೇಮಲತಾ, ಜೇಸಿಐ ಅಧ್ಯಕ್ಷ ರಮಾಕಾಂತ್ ಕಾಲಿಕರ್, ಕಾರ್ಯದರ್ಶಿ ಪಿ.ಸತ್ಯನಾರಾಯಣ, ರೋಟರಿ ಅಧ್ಯಕ್ಷ ಸತೀಶ್, ಕಾರ್ಯದರ್ಶಿ ರಂಗಲಿಂಗನಗೌಡ ಸೇರಿದಂತೆ ಅನೇಕರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮೆರೆದಿರುವ ಪಿಎಸ್ಸೈ ಬೇಬಿ ವಾಲಿಕಾರ್, ಡಾ. ಶೀಲಾ ದಾಸ್, ಕೆ.ರಬಿಕಾ, ಜಮುನಾ ಶುಕ್ಲಾ, ಗೋದಾವರಿ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಜೇಸಿಐ ಸಂಸ್ಥೆಯ ಜಂಬಣ್ಣ, ಬಸವರಾಜ್, ಮಧು, ನವೀನ್, ಮನೋಜ್ ಹಾಗೂ ಅನೇಕರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement