ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅನಧಿಕೃತ ನೀರಿನ ಘಟಕಗಳಿಗೆ ಪರವಾನಗಿಯಿಲ್ಲ: ಎಡಿಸಿ ಸ್ಪಷ್ಟನೆ

Lingaraj Badiger
Updated On : 27 Mar 2013, 10:47 am

ರಾಯಚೂರು: ಜಿಲ್ಲೆಯಲ್ಲಿ ಕೇವಲ ಎರಡು ಕುಡಿಯುವ ನೀರಿನ ಉತ್ಪಾದನೆ ಘಟಕಗಳು ಮಾತ್ರ ಬಿಎಸ್‌ಐ ಸಂಸ್ಥೆಯಿಂದ ಐಎಸ್‌ಐ ಪ್ರಮಾಣ ಪತ್ರ ಪಡೆದಿದ್ದು, ಇನ್ನುಳಿದಂತೆ ಯಾವುದೇ ಘಟಕಗಳಿಗೆ ಜಿಲ್ಲಾಡಳಿತ ಪರವಾನಗಿಯನ್ನು ನೀಡಿಲ್ಲ ಎಂದು ಹೆಚ್ಚುವರಿ ಡಿಸಿ ತಿಮ್ಮಪ್ಪ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಅನಧಿಕೃತ ಘಟಕಗಳಿಗೆ ಪರವಾನಗಿ ನೀಡಿಲ್ಲ. ಈ ಹಿಂದೆ ಹರ್ಬಲ್ ನೀರು ಉತ್ಪಾದಿಸುತ್ತಿದ್ದ ನೀರಿನ ಘಟಕಗಳಿಗೆ ದಾಳಿ ಮಾಡಿ ಮುಚ್ಚಲಾಗಿದೆ. ಈ ಘಟಕಗಳ ಮಾಲೀಕರು ಗುಲ್ಬರ್ಗದ ಉಚ್ಚ ನ್ಯಾಯಾಲಯದ ಪೀಠದಲ್ಲಿ ಮೊಕದ್ದಮೆ ಹೂಡಿದ್ದು, ಈ ಪ್ರಕರಣ ವಿಚಾರಣೆ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.
ಅದೇ ರೀತಿ ಜಿಲ್ಲೆಯಲ್ಲಿದ್ದ ಎಲ್ಲ 47 ಅನಧಿಕೃತ ನೀರಿನ ಘಟಕಗಳಿಗೆ ನೋಟಿಸ್ ಜಾರಿ ಮಾಡಿ ಮುಚ್ಚಲಾಗಿದೆ. 2013ರ ಜ.22ರಂದು ಜಿಲ್ಲಾಧಿಕಾರಿ ನೇತೃತ್ವದ ತಂಡವು ನೀರಿನ ಘಟಕಗಳಿಗೆ ಭೇಟಿ ನೀಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಮುಚ್ಚಿರುವ ನೀರಿನ ಉತ್ಪಾದನೆ ಘಟಕಗಳಿಗೆ ಜಿಲ್ಲಾಡಳಿತವು ತಲಾ 10 ಸಾವಿರ ದಂಡ ವಿಧಿಸಿದೆ. ಮುಂದಿನ ದಿನಗಳಲ್ಲಿ ನೀರಿನ ಘಟಕಗಳು ಪುನಾ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಅಂಥ ಘಟಕಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement