ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಾಂಗ್ರೆಸ್‌ನಿಂದ ನೀತಿ ಸಂಹಿತೆ ಉಲ್ಲಂಘನೆ; ಬಿಎಸ್ಸಾರ್ ದೂರು

Lingaraj Badiger
Updated On : 27 Mar 2013, 10:39 am

ಸಿಂಧನೂರು: ನಗರದ ಎ.ಕೆ. ಗೋಪಾಲನಗರದಲ್ಲಿ ಸೋಮವಾರ ಅಲ್ಲಿಯ ನಿವಾಸಿಗಳು ಶಾಲಾ ಕಾಂಪೌಂಡ್‌ನಲ್ಲಿ ಕೊಳವೆಬಾವಿ ಕೊರೆಯಿಸಿದ ಘಟನೆ ನಡೆದಿದೆ.  
ಮಧ್ಯಾಹ್ನ ಬೋರ್‌ವೆಲ್ ವಾಹನ ಕರೆದುಕೊಂಡು ಬಂದ ನಿವಾಸಿಗಳು, ಏಕಾಏಕಿ ಶಾಲಾ ಕಾಂಪೌಂಡ್‌ಯೊಳಗೆ ಬೋರ್‌ವೆಲ್ ಕೊರೆಸಲು ಮುಂದಾದಾಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎ.ಬಿ. ಪಾಟೀಲ್ ಕಾಂಪೌಂಡ್‌ನೊಳಗೆ ಬೋರ್‌ವೆಲ್ ಹಾಕಿದರೆ ಮಕ್ಕಳಿಗೆ ತೊಂದರೆ ಎಂದು ತಡೆಯಲು ಪ್ರಯತ್ನಿಸಿದ್ದಾರೆ. ಈ ಮಧ್ಯೆ ಮುಖ್ಯೋಪಾಧ್ಯಾಯರು ಮತ್ತು ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆದಿದೆ.
ಬೋರ್‌ವೆಲ್ ಹಾಕದಂತೆ ಮುಖ್ಯೋಪಾಧ್ಯಾಯರು ಕೇಳಿಕೊಂಡರೂ ನೆರೆದಿದ್ದ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. ನಮಗೆ ಬೇಸಿಗೆ ದಿನದಲ್ಲಿ ಬಳಕೆಗೆ ಮತ್ತು ಕುಡಿಯಲು ನೀರನ್ನು ನೀವು ಕೊಡುವಿರಾ ಎಂದು ಪ್ರಶ್ನಿಸುವ ಮೂಲಕ ಶಾಲಾ ಕಾಂಪೌಂಡ್‌ನಲ್ಲಿ ಬೋರ್‌ವೆಲ್ ಹಾಕಿಸಲು ಮುಂದಾಗಿದ್ದಾರೆ.
ಬಿಎಸ್‌ಆರ್ ಕಾಂಗ್ರೆಸ್ ದೂರು: ಚುನಾವಣಾ ನೀತಿ ಸಂಹಿತೆ ಇರುವಾಗ ಕಾಂಗ್ರೆಸ್ ಪಕ್ಷದವರು ಬೋರ್‌ವೆಲ್ ಹಾಕಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮುಖಂಡರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಅವರ ದೂರಿನನ್ವಯ ಪ್ರಬಾರಿ ತಹಸೀಲ್ದಾರ್ ರಾಮಣ್ಣ ಸ್ಥಳಕ್ಕೆ ತೆರಳಿ ಶಾಲಾ ಕಾಂಪೌಂಡ್‌ನಲ್ಲಿ ಬೋರ್ ಹಾಕುವುದಕ್ಕೆ ತಡೆ ಮಾಡಲು ಪ್ರಯತ್ನಿಸಿದ್ದಾರೆ. ಆದಾಗ್ಯೂ ವಾರ್ಡ್‌ನ ನಿವಾಸಿಗಳು ಕುಡಿಯಲು ನೀರಿಲ್ಲ. ಹಾಗದರೆ ನೀವೇ ಬೇರೆಕಡೆ ಹಾಕಿಸಿಕೊಡಿ ಎಂದು ಪ್ರಶ್ನಿಸಿದ್ದರಿಂದ ಮರು ಮಾತನಾಡದೆ ರಾಮಣ್ಣ ಮರಳಿದ್ದಾರೆ. ಈ ಮಧ್ಯೆ ಶಾಲಾ ಮುಖ್ಯೋಪಾಧ್ಯಾಯರು ಕ್ಷೇತ್ರ ಶಿಕ್ಷಣಾಧಿಕಾರಿಗೆ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆಂದು ತಿಳಿದುಬಂದಿದೆ. ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಿದಾಗ ತಾವು ರಾಯಚೂರಿನಲ್ಲಿ ಇರುವುದಾಗಿ ತಿಳಿಸಿದ ಅವರು ಮುಖ್ಯೋಪಾಧ್ಯಾಯರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಪ್ರತಿಕ್ರಿಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement