ನವವಿಧ ಶ್ರವಣದಿಂದ ಜೀವನ ಪಾವನ: ನಾರಾಯಣಾಚಾರ್
ಸಿಂಧನೂರು: ಪ್ರಹ್ಲಾದರಾಜರ ನವವಿಧ ಭಕ್ತಿಯ ಶ್ರವಣ ಮಾಡಿದರೆ ಜೀವನ ಪಾವನವಾಗುತ್ತದೆ ಎಂದು ಖ್ಯಾತ ವಿದ್ವಾಂಸ ನಾರಾಯಣಾಚಾರ್‌ಉ ಆತ್ಕೂರ ಹೇಳಿದರು.
ಅವರು ಶ್ರೀರಾಮಮಂದಿರದ ಆವರಣದಲ್ಲಿ ಅನಂತ ಪದ್ಮನಾಭ ಜ್ಞಾನ ಪ್ರಸಾರ ಸಮಿತಿಯವರು ಎರಡು ದಿನಗಳ ಕಾಲ ಪ್ರಹ್ಲಾದರಾಜರ ನವವಿಧ ಭಕ್ತಿಯ ಕುರಿತು ನಡೆಸಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಹ್ಲಾದರಾಜರೇ ವ್ಯಾಸರಾಜರಾಗಿ, ರಾಘವೇಂದ್ರ ಸ್ವಾಮಿಗಳಾಗಿ ಕಲಿಯುಗದ ಕಾಮಧೇನು-ಕಲ್ಪವೃಕ್ಷವಾಗಿ ಭಕ್ತರನ್ನು ಉದ್ದರಿಸುತ್ತಿದ್ದಾರೆ.
ಮಾನವಿಯ ಜಗನ್ನಾಥ ದಾಸರ ಮಂದಿರದ ವ್ಯವಸ್ಥಾಪಕರು ಹಾಗೂ ಪಂಡಿತರಾದ ದ್ವಾರಕನಾಥಾಚಾರ ಮಾತನಾಡಿ, ಪ್ರಹ್ಲಾದರಾಜರು ಯಾಗಮಾಡಿದ ಸ್ಥಳದಲ್ಲಿಯೇ ಶ್ರೀಗುರುರಾಯರ ಇಚ್ಛೆಯಂತೆ ವೃಂದಾನವಸ್ಥರಾದದ್ದು, ಆ ಸ್ಥಳದ ಮಹಿಮೆಯಾಗಿದೆ. ಆದ್ದರಿಂದಲೇ ಏಳುನೂರು ವರ್ಷ ರಾಯರು ವೃಂದಾವನದಲ್ಲಿದ್ದು, ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಿದ್ದಾರೆ. ಅವರ ಪಾದಸೇವೆ ಮಾಡುವ ಮೂಲಕ ಎಲ್ಲರೂ ಉದ್ದಾರವಾಗಬೇಕು ಎಂದು ನುಡಿದರು.
ಸನ್ಮಾನ: ವಿಪ್ರಶ್ರೀ ಪ್ರಶಸ್ತಿ ಪುರಸ್ಕೃತ ಎಂ.ಕೆ.ಗೌರಕರ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಹ್ಲಾದ ಗುಡಿ, ನಗರಸಭೆ ಸದಸ್ಯ ವೆಂಕಟೇಶ ಬಂಡಿ ಅವರನ್ನು ಪಂಡಿತರಾದ ನಾರಾಯಣಾಚಾರ ಆತ್ಕೂರ, ದ್ವಾರಕನಾಥಾಚಾರ ಅನಂತ ಪದ್ಮನಾಭ ಜ್ಞಾನ ಪ್ರಸಾರ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಿದರು.
ಸಮಿತಿಯ ಸಂಚಾಲಕ ರಾಮಕೃಷ್ಣಾಚಾರ ಗೋನವಾರ, ಸಹಸಂಚಾಲಕ ಶಂಕರನಾರಾಯಣಾಚಾರ ಆಲಂಪಲ್ಲಿ, ಬ್ರಾಹ್ಮಣ ಸಮಾಜದ ಅಧ್ಯಕ್ಷ ಕೆ.ರಾಮರಾವ್, ವಿಪ್ರನೌಕರರ ಸಂಘದ ಅಧ್ಯಕ್ಷ ಪಾಂಡುರಂಗ ದೇಸಾಯಿ, ಆದಿತ್ಯನಾರಾಯಣ ಪತ್ತಿನ ಸೌಹಾರ್ಧ ಸಹಕಾರಿ ನಿಯಮಿತದ ಅಧ್ಯಕ್ಷ ವೆಂಕಟೇಶಾಚಾರ ಕೆಂಗಲ್ ಮತ್ತಿತರರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಸಮಿತಿಯ ಸದಸ್ಯ ಲಕ್ಷ್ಮಣರಾವ್ ಕುಲಕರ್ಣಿ ನಿರೂಪಿಸಿದರು.