ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಾರ್ಮಿಕನ ಮೇಲೆ ಹಲ್ಲೆ: ಕ್ರಮಕ್ಕೆ ಮನವಿ

Rashmi Kasaragodu
Updated On : 28 Mar 2013, 11:39 am

ರಾಯಚೂರು: ಇಲ್ಲಿನ ಸುರಾನಾ ಕಂಪನಿಯ ಅಧಿಕಾರಿಗಳು ದಲಿತ ಕಾರ್ಮಿಕನ ಮೇಲೆ ಹಲ್ಲೆ ಮಾಡಿದ್ದು ಹಲ್ಲೆ ನಡೆಸಿದ ಅಧಿಕಾರಿಗಳನ್ನು ಕೂಡಲೇ ಬಂಧಿಸುವಂತೆ ಹೈ. ಕ. ವಿಮೋಚನಾ ವೇದಿಕೆ ಆಗ್ರಹಿಸಿದೆ.
ಈ ಕುರಿತು ಜಿಲ್ಲಾಡಳಿತಕ್ಕೆ ಈಚೆಗೆ ವೇದಿಕೆಯ ಜಿಲ್ಲಾ ಸಂಯೋಜಕ ಅನಿಲಕುಮಾರ್, ತಾಲೂಕು ಸಂಯೋಜಕ ತಾಯಪ್ಪ ಹೆಗ್ಗಸನಳ್ಳಿ, ವೀರಮ್ಮ ಮತ್ತಿತರರು ಮನವಿ ಸಲ್ಲಿಸಿ, ನಗರದ ಕೈಗಾರಿಕೆ ಪ್ರದೇಶದಲ್ಲಿರುವ ಸುರಾನಾ ಸ್ಟೀಲ್ ಕಂಪನಿಯ ಕಾರ್ಮಿಕರ ವೇತನ ಮತ್ತು ಇತರೆ ಸೌಲಭ್ಯಗಳಿಗೆ ಆಗ್ರಹಿಸಿ ಈಚೆಗೆ ಕಾರ್ಮಿಕರು ಅನಿರ್ದಿಷ್ಟ ಧರಣಿ ನಡೆಸಿದ ವೇಳೆ ಕಂಪನಿಯ ಐವರು ಅಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಾಬು ಅವರನ್ನು ಹೋರಾಟ ಕೈಬಿಡುವಂತೆ ಜೀವಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಈಗಾಗಲೇ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಐವರು ಅಧಿಕಾರಿ ಗಳನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವೇದಿಕೆಯ ಸದಸ್ಯರು ಆಗ್ರಹಿಸಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement