ಜೆಡಿಯು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಸಿಂಧನೂರು: ಸಿಂಧನೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ರಾಯಚೂರು ಜಿಲ್ಲೆಯ 7 ಕ್ಷೇತ್ರಗಳಿಗೆ ಜೆಡಿಯುನ ಅಭ್ಯರ್ಥಿಗಳ ಪಟ್ಟಿಯನ್ನು ಜೆಡಿಯು ಜಿಲ್ಲಾಧ್ಯಕ್ಷ ಶಾಂತನಗೌಡ ಜಾಗೀರದಾರ ಪ್ರಕಟಿಸಿದರು.
ರಾಯಚೂರು ಕ್ಷೇತ್ರಕ್ಕೆ ವೀರನಗೌಡ ಮಾನ್ವಿ ಅಥವಾ ನೂರಹ್ಮದ್, ಸಿಂಧನೂರು ಕ್ಷೇತ್ರಕ್ಕೆ ಶಾಂತನಗೌಡ ಜಾಗೀರದಾರ, ದೇವದುರ್ಗ ಕ್ಷೇತ್ರಕ್ಕೆ ಚೆನ್ನಬಸವ ನಾಯಕ ಅರಕೇರ ಅಥವಾ ವೆಂಕಟೇಶ ಜರಟಿನಮರಡಿ, ಮಾನ್ವಿ ಕ್ಷೇತ್ರಕ್ಕೆ ಮುದುಕಪ್ಪ ನಾಯಕ, ರಾಯಚೂರು ಗ್ರಾಮೀಣ ಕ್ಷೇತ್ರಕ್ಕೆ ಸೂಗೂರಪ್ಪನಾಯಕ ಅಥವಾ ರಾಮುಲು ಬಾಯಿದೊಡ್ಡಿ, ಮಸ್ಕಿ ಕ್ಷೇತ್ರಕ್ಕೆ ಶರಣಪ್ಪ ನಾಯಕ ಅಥವಾ ನರಹರಿ ನಾಯಕ, ಲಿಂಗಸ್ಗೂರು ಕ್ಷೇತ್ರಕ್ಕೆ ಶೇಖರಪ್ಪ ಶಿಮಗಿ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. ಅಂತಿಮ ಹಂತದಲ್ಲಿ ಸಿಂಧನೂರು ಕ್ಷೇತ್ರಕ್ಕೆ ಮಹಿಳೆ ಅಥವಾ ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಕಣಕ್ಕಿಳಿಸಲಾಗುವುದು ಎಂದು ಶಾಂತಗೌಡ ಜಾಗೀರದಾರ ತಿಳಿಸಿದ್ದಾರೆ.