ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಗರಸಭೆ ನೂತನ ಸದಸ್ಯರಿಗೆ ಸನ್ಮಾನ

Rashmi Kasaragodu
Updated On : 28 Mar 2013, 11:33 am

ರಾಯಚೂರು: ನಗರದ ಶ್ರೀರಾಮನಗರ ಕಾಲೋನಿಯ ಕೋದಂಡರಾಮ ದೇವಾಲಯ ಆವರಣದಲ್ಲಿ ಇತ್ತೀಚೆಗೆ ನಗರಸಭೆಗೆ ನೂತನ ಸದಸ್ಯರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು.
ನಗರಸಭೆಯ ನೂತನ ಸದಸ್ಯರಾದ ಜಯಣ್ಣ ಮತ್ತು ಮಹಾದೇವಿ ಅವರನ್ನು ಈ ವೇಳೆ ಶ್ರೀರಾಮನಗರ ಕಾಲೋನಿ, ಮಾರುತಿ ಕಾಲನಿ ನಿವಾಸಿಗಳು ಸನ್ಮಾನಿಸಿದರು. ನಿವೃತ್ತ ಪ್ರಾಚಾರ್ಯ ನರಸಣ್ಣ ಮಾತನಾಡಿ, ವಾರ್ಡುಗಳಲ್ಲಿ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸದಸ್ಯರಾದ ಜಯಣ್ಣ ಹಾಗೂ ಮಹಾದೇವಿ ಅವರು, ನಿವಾಸಿಗಳ ಬೇಡಿಕೆಗಳಿಗೆ ತುರ್ತಾಗಿ ಸ್ಪಂದಿಸಿ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಪಂಪಾಪತಿ ಎಂಜಿನಿಯರ್, ಮೀನಪ್ಪ ವಕೀಲರು, ಮಲ್ಲಿಕಾರ್ಜುನ ಸುಹಾಸ್ ಮಾನಸಗಲ್, ಭೀಮಸೇನ ನಾಯಕ, ಶರಣಪ್ಪ ಸೇರಿದಂತೆ ಅನೇಕರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement