ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಯೋಗದಿಂದ ಮಾನಸಿಕ ನೆಮ್ಮದಿ

Rashmi Kasaragodu
Updated On : 28 Mar 2013, 11:35 am

ಕನ್ನಡಪ್ರಭ ವಾರ್ತೆ   ಸಿಂಧನೂರು   ಮಾ.27
ನಾಗಾಲೋಟದ ವೇಗದ ಜೀವನದಲ್ಲಿ ಮಾನಸಿಕ ನೆಮ್ಮದಿ ಕಡಿಮೆಯಾಗುತ್ತಿದ್ದು, ಯೋಗದಿಂದ ಮಾನಸಿಕ ನೆಮ್ಮದಿ ಸಾಧ್ಯ ಎಂದು ಸರ್ವೋದಯ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಎಸ್.ವಿ. ಪಾಟೀಲ್ ಹೇಳಿದರು.
ನಗರದ ಸರ್ವೋದಯ ವಿದ್ಯಾಸಂಸ್ಥೆಯಲ್ಲಿ ಬುಧವಾರ ಪತಂಜಲಿ ಯೋಗ ಸಮಿತಿ ನೇತೃತ್ವದಲ್ಲಿ ಹೋಳಿ ಹಬ್ಬದ ಪ್ರಯುಕ್ತ ನಡೆದ ವಿಶೇಷ ಯೋಗ ತರಬೇತಿ ಶಿಬಿರದಲ್ಲಿ ಮಾತನಾಡಿ, ಯೋಗದಿಂದ ರೋಗಗಳು ಕಡಿಮೆಯಾಗುತ್ತವೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದರು.
ಶಿಬಿರದ ನೇತೃತ್ವ ವಹಿಸಿದ್ದ ಪತಂಜಲಿ ಯೋಗ ಸಮಿತಿಯ ರಾಜ್ಯ ಯುವ ಪ್ರಭಾರಿ ಎಂ.ಭಾಸ್ಕರ್ ಮಾತನಾಡಿ, ಗೆಲವಿನ ಬೀಜ ನಿರಾಸೆಯ ನೆಲವನ್ನು ಭೇದಿಸಿ ಮೊಳಕೆಯೊಡೆಯುತ್ತದೆ. ಗೆಲವಿನ ನಂಬಿಕೆಯೊಂದಿಗೆ ಸಾಗುತ್ತಾ ಹೊಸ ಪೀಳಿಗೆಗೆ ಸಂಸ್ಕೃತಿ, ಗುರು- ಹಿರಿಯರ ಬಗ್ಗೆ ಗೌರವ, ದೇಶಭಕ್ತಿ ರೂಢಿಸುವುದರೊಂದಿಗೆ ಅವಮಾನ, ದುಃಖ, ನೋವು, ನಷ್ಟಗಳನ್ನು ತಾಳ್ಮೆಯಿಂದ ಎದುರಿಸುವ ಸ್ಥೈರ್ಯ ನೀಡಬೇಕಾಗಿದೆ ಎಂದರು.
ಕಾಮ-ಕ್ರೋಧ ಅಳಿದು ಶಾಂತಿ ಲಭಿಸಲಿ: ಯೋಗ ಸಾಧಕರಾದ ವೆಂಕಣ್ಣಾಚಾರ್ ಜೋಷಿ ದೋಟಿಹಾಳ ಮಾತನಾಡಿ, ಕಾಮದಹನದ ಸಂಕೇತವಾದ ಹೋಳಿಯ ದಿನ ವಿಶೇಷವಾಗಿ ಏರ್ಪಡಿಸಿದ್ದ ಈ ಶಿಬಿರದಿಂದ ಎಲ್ಲೆಡೆ ಆರೋಗ್ಯ ಭಾಗ್ಯ ಪಸರಿಸಿ ಕಾಮ- ಕ್ರೋಧಗಳು ಅಳಿದು ಹೋಗಿ ಶಾಂತಿ ಲಭಿಸಲಿ ಎಂದು ಹಾರೈಸಿದರು.
ನಗರಸಭೆಯ ನೂತನ ಸದಸ್ಯರಾದ ಆಶಾಬೀ ಅಬ್ದುಲ್ ಸತ್ತಾರ, ಸುಮಂಗಲಾ ಮಲ್ಲಿಕಾರ್ಜುನ, ಪತಂಜಲಿ ಯೋಗ ಸಮಿತಿಯ ಉಪಾಧ್ಯಕ್ಷ ಮುರಳೀಧರ ಖೋಡೆ, ಆದರ್ಶ ಕಾಲನಿ ನಿರಂತರ ಯೋಗ ಕೇಂದ್ರದ ಅಧ್ಯಕ್ಷ ಶಂಕರ ಶೆಟ್ಟಿ, ದತ್ತಾತ್ರೇಯ ಬಾದರ್ಲಿ, ಯೋಗ ಶಿಕ್ಷಕಿ ಕೆ.ಧನಲಕ್ಷ್ಮಿ ಹಾಜರಿದ್ದರು.
ಶಿಬಿರದಲ್ಲಿ ನನ್ನುಸಾಬ ಮೇಸ್ತ್ರಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ರಮಾದೇವಿ ಶಂಭೋಜಿ, ಮಮತಾ ಹಿರೇಮಠ, ಸರಸ್ವತಿ ಪಾಟೀಲ್, ಮರೇಗೌಡ, ಮೇನಕಾದೇವಿ, ಸೌಭಾಗ್ಯಲಕ್ಷ್ಮಿ, ರಾಜಶ್ರೀ ಇರಕಲ್, ವಿಮಲಾವಾಣಿ, ವನಿತಾ ಶೆಟ್ಟಿ, ಟಿ.ಬಿ. ಬಡಿಗೇರ್, ಅಮರಗುಂಡಪ್ಪ, ಎಚ್. ಶ್ರೀನಿವಾಸ, ಸುಬ್ಬಾರಾವು, ವೆಂಕೋಬಣ್ಣ, ಮಲ್ಲಿಕಾರ್ಜುನ , ಬಸವರಾಜ ವಕೀಲರು, ಗಂಗಾಧರ, ಕುಬೇರಪ್ಪ, ಅಪ್ಪಣ್ಣ, ಡ್ಯಾನ್ಸ್ ಬಸವರಾಜ, ಕಲ್ಯಾಣ, ರಮೇಶ ಪಾಟೀಲ್, ಉಮೇಶ, ಪ್ರಶಾಂತ, ಚಂದ್ರು ಮತ್ತಿತರರು ಹಾಜರಿದ್ದರು. ಕಾರ್ಯಕ್ರಮವನ್ನು ವಚನಗೀತಾ ನಿರೂಪಿಸಿದರು. ನರಸಿಂಹಮೂರ್ತಿ ಪ್ರಾರ್ಥಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement