ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವಿಜೃಂಭಣೆಯ ಅಮರೇಶ್ವರ ರಥೋತ್ಸವ

Rashmi Kasaragodu
Updated On : 28 Mar 2013, 11:37 am

ಕನ್ನಡಪ್ರಭ ವಾರ್ತೆ   ಲಿಂಗಸ್ಗೂರು   ಮಾ.27
ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗುಡಗುಂಟಿಯ ಅಮರೇಶ್ವರ ದೇವರ ಜಾತ್ರಾ ಮಹೋತ್ಸವದ ಸಂದರ್ಭ ಬುಧವಾರ ಸಂಜೆ ಮಹಾರಥೋತ್ಸವ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಪ್ರತಿವರ್ಷದಂತೆ ಹೋಳಿ ಹುಣ್ಣಿಮೆ ದಿನದಂದು ಜರುಗುವ ಅಮರೇಶ್ವರ ದೇವರ ಜಾತ್ರಾ ಮಹೋತ್ಸವವು, ಗುಡಗುಂಟಿ ಹಾಗೂ ಗುಂತಗೋಳ ಸಂಸ್ಥಾನದಿಂದ ಅಮರೇಶ್ವರ ಗುರುಅಭಿನವ ಗಜದಂಡ ಶ್ರೀಗಳ ಸಮ್ಮುಖದಲ್ಲಿ ಕಳಶ ಹಾಗೂ ಉತ್ಸವ ಮೂರ್ತಿಯನ್ನು ಪುರವಂತಿಗೆ ಮೆರವಣಿಗೆ ಸಮೇತ ಅಮರೇಶ್ವರ ಸುಕ್ಷೇತ್ರಕ್ಕೆ ಆಗಮಿಸಿದ ನಂತರ ಬುಧವಾರ ಕೃಷ್ಣಾ ನದಿಯಲ್ಲಿ ಪುಣ್ಯ ಸ್ನಾನ ಹಾಗೂ ವಿಶೇಷ ಪೂಜೆ ಸಲ್ಲಿಸಿದ ಬಳಿಕ ರಥಕ್ಕೆ ಕಳಶಾರೋಹಣ ನೆರವೇರಿಸಲಾಯಿತು.
ರಥೋತ್ಸವಕ್ಕೆ ಚಾಲನೆ: ಸಂಜೆ ಅಭಿನವ ಗುರುಗಜದಂಡ ಶ್ರೀಗಳು ಉತ್ಸವ ಮೂರ್ತಿಯೊಂದಿಗೆ ರಥದಲ್ಲಿ ಆಸೀನರಾದ ಬಳಿಕ ವಿಶೇಷ ಪೂಜೆ ಸಲ್ಲಿಸಿ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಮಹಾರಥೋತ್ಸವ ಪಾದಗಟ್ಟೆ ಬಸವಣ್ಣ ದೇವಸ್ಥಾನದವರೆಗೆ ಸಾಗುತ್ತಿದ್ದಂತೆ ನೆರೆದಿದ್ದ ಭಕ್ತಸಾಗರ ಜಯ ಘೋಷಗಳೊಂದಿಗೆ ಉತ್ತತ್ತಿ, ಬಾಳೇಹಣ್ಣು, ಫಲ-ಪುಷ್ಪಗಳನ್ನು ರಥಕ್ಕೆ ಎಸೆದು ಭಕ್ತಿ ಸಮರ್ಪಿಸಿದರು.
ರಥೋತ್ಸವದಲ್ಲಿ ಗುಡಗುಂಟಿ ಸಂಸ್ಥಾನದ ರಾಜಾ ಸೋಮನಾಥ ನಾಯಕ, ಗುಂತಗೋಳ ಸಂಸ್ಥಾನದ ರಾಜಾ ಶ್ರೀನಿವಾಸ ನಾಯಕ, ಸಹಾಯಕ ಆಯುಕ್ತ ಟಿ.ಯೋಗೇಶ್, ತಹಸೀಲ್ದಾರ್ ಎನ್.ಬಿ.ಪಾಟೀಲ್, ಶಾಸಕರಾದ ಅಮರೇಗೌಡ ಬಯ್ಯಾಪುರ, ರಾಜಾ ರಾಯಪ್ಪ ನಾಯಕ, ಮಾನಪ್ಪ ವಜ್ಜಲ್, ದೊಡ್ಡನಗೌಡ ಲೆಕ್ಕಿಹಾಳ, ಎಚ್.ಬಿ.ಮುರಾರಿ, ಸಿದ್ದು ಬಂಡಿ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಾತ್ರಾ ಮಹೋತ್ಸವದ ಮಹಾರಥೋತ್ಸವದಲ್ಲಿ ಪಾಲ್ಗೊಂಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement