13 ಜನ ಚಿನ್ನದ ವಿದ್ಯಾರ್ಥಿಗಳು
ರಾಯಚೂರು: ನಗರದಲ್ಲಿ ಮಾ.30ರಂದು ನಡೆಯುವ ರಾಯಚೂರು ಕೃಷಿ ವಿವಿ ಯ ಮೂರನೇ ಘಟಿಕೋತ್ಸವದಲ್ಲಿ 13 ಜನ ಪ್ರತಿಭಾವಂತರು ಚಿನ್ನದ ಪದಕ ಮತ್ತು ನಗದು ಪುರಸ್ಕಾರಕ್ಕೆ ಭಾಜನರಾಗಲಿದ್ದಾರೆ.
ಘಟಿಕೋತ್ಸವದಲ್ಲಿ ಸ್ನಾತಕ ಪದವಿಯಲ್ಲಿನ ಅತ್ಯುತ್ತಮ ಸಾಧನೆಗೆ ರಾಯಚೂರು ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿ ಸಂತೋಷ ಕುಮಾರ್ ತಿವಾರಿ ನಾಲ್ಕು ಚಿನ್ನದ ಪದಕ, ಭೀಮರಾಯನಗುಡಿಯ ಕೃಷಿ ಮಹಾವಿದ್ಯಾಲಯದ ಮಲ್ಲಾರೆಡ್ಡಿ 6 ಚಿನ್ನದ ಪದಕ, ರೇಖಾ ಬಡಲಿಂಗಪ್ಪನವರ್ ಒಂದು ಚಿನ್ನದ ಪದಕ ಪಡೆಯಲಿದ್ದಾರೆ.
ಅದೇ ರೀತಿ ಕೃಷಿ ತಾಂತ್ರಿಕ ಪದವಿಯಲ್ಲಿ ದುಶ್ಶಂತ್ ಕುಮಾರ್ ನಾಲ್ಕು ಚಿನ್ನದ ಪದಕ ಮತ್ತು ಎರಡು ನಗದು ಪುರಸ್ಕಾರ ಪಡೆಯಲಿದ್ದಾರೆ. ಸ್ನಾತಕೋತ್ತರ ವಿಭಾಗದಲ್ಲಿ ಅಗ್ರಿಕಲ್ಚರ್ ಎಕಾನಮಿಕ್ಸ್ನಲ್ಲಿ ಪ್ರಿಯಾಂಕ್. ಕೆ., ಅಗ್ರಿಕಲ್ಚರ್ ಎಕ್ಸಟೆನ್ಶನ್ ಎಜುಕೇಷನ್ನಲ್ಲಿ ಅಪರ್ಣಾ ರಾಧಾಕೃಷ್ಣನ್, ಅಗ್ರಿಕಲ್ಚರಲ್ ಎಂಟಮಾಲಜಿಯಲ್ಲಿ ಪ್ರಕಾಶ್, ಅಗ್ರಿಕಲ್ಚರಲ್ ಮೈಕ್ರೋಬಯಾಲಜಿಯಲ್ಲಿ ಅನು ತಲೋಹ, ಜೆನೆಟಿಕ್ಸ್ ಆಂಡ್ ಪ್ಲಾಂಟ್ ಬ್ರೀಡಿಂಗ್ ನಲ್ಲಿ ಸಿ.ಕೆ. ಚೇತನಾ, ಪ್ಲಾಂಟ್ ಪೆಥಾಲಜಿಯಲ್ಲಿ ನೂರುಲ್ಲಾ ಹಾವೇರಿ, ಸೀಡ್ ಸೈನ್ಸ್ ಆಂಡ್ ಟೆಕ್ನಾಲಜಿಯಲ್ಲಿ ಉಮೇಶ್, ಎಂ.ಟೆಕ್ ಇನ್ ಫಾರ್ಮ್ ಮೆಷಿನರಿ ಅಂಡ್ ಪವರ್ ಎಂಜಿನಿಯರಿಂಗ್ನಲ್ಲಿ ಬೀರ್ಜೆ ರಮೇಶ್ ಮನೋಹರ್ ಹಾಗೂ ಸಾಯಿಲ್ ಅಂಡ್ ವಾಟರ್ ಎಂಜಿನಿಯರಿಂಗ್ನಲ್ಲಿ ಮಹಮ್ಮದ್ ವಸೀಂ ಚಿನ್ನದ ಪದಕ ಪಡೆಯಲಿದ್ದಾರೆಂದು ವಿವಿ ಪ್ರಕಟಣೆ ತಿಳಿಸಿದೆ.