ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ
ದೇವದುರ್ಗ: ಶಿಕ್ಷಣ ಪಡೆಯುವ ಜತೆಗೆ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಬೇಕೆಂದು ಭೂದಾನಿಗಳಾದ ಗಂಧಲ್ ರಾಮನಗೌಡ ನಾಯಕ ಹೇಳಿದರು. ಅವರು ಈಚೆಗೆ ತಾಲೂಕಿನ ಸುಂಕೇಶ್ವರಹಾಳ ಗ್ರಾಮದ ಶ್ರೀಗಂಧಲ್ ರಾಮನಗೌಡ ನಾಯಕ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಈ ಸಂದರ್ಭ 2011-12ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಮುಖ್ಯಗುರು ನಿತ್ಯಾನಂದ ಬಿ.ಎಸ್, ಶಿಕ್ಷಕರಾದ ಪ್ರಕಾಶ, ಮಲ್ಲಿಕಾರ್ಜುನ, ಗಿರಿಜಮ್ಮ, ಸರಸ್ವತಿ ಮಾತನಾಡಿದರು. ಹೊನ್ನಪ್ಪ, ನಾಗರೆಡ್ಡಿ, ದೈಹಿಕ ಶಿಕ್ಷಕರಾದ ಅಶೋಕ ಕುಮಾರ, ಮಂಜುನಾಥ ಇದ್ದರು.