ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮುದಗಲ್; ರಂಗಿನ ಹೋಳಿ

Rashmi Kasaragodu
Updated On : 29 Mar 2013, 12:00 pm

ಮುದಗಲ್: ಪಟ್ಟಣದಲ್ಲಿ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಯಿತು. ಮಕ್ಕಳು, ದೊಡ್ಡವರು, ಯುವಕರು, ಮಹಿಳೆಯರು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು.
ಬಣ್ಣದ ಓಕಳಿ ಇದ್ದುದರಿಂದ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ವ್ಯಾಪಾರಿಗಳು, ಉದ್ಯೋಗಸ್ಥರು ಸಹಿತ ಬಣ್ಣ ಎರಚಾಟದಲ್ಲಿ ತೊಡಗಿದ್ದರಿಂದ ಓಕಳಿಗೆ ರಂಗು ತಂದಿತ್ತು. ಕೆಲ ಯುವಕರು ಅಣಕು ಶವ ಮಾಡಿ ಪಟ್ಟಣದಲ್ಲಿ ಮೆರವಣಿಗೆ ಮಾಡಿದರು. ಬಣ್ಣದ ಓಕಳಿ ಹಬ್ಬ ಶಾಂತಿಯುತವಾಗಿ ಸಂಭ್ರಮದಿಂದ ಮುಕ್ತಾಯಗೊಂಡಿತು. ಓಕಳಿ ಸಂಭ್ರಮದಲ್ಲಿ ಎಲ್ಐಸಿ ಡೆವಲಮೆಂಟ್ ಆಫೀಸರ್ ಎಲ್.ಟಿ. ನಾಯಕ, ನಾಗರಿಕ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ರಚನಿಕಾಂತ ಶೆಟ್ಟಿ, ಮುಖಂಡರಾದ ಉದಯಕುಮಾರ, ಕರಿಯಪ್ಪ ಕವಡಿಮಟ್ಟಿ, ಡಾ.ಅಯ್ಯಪ್ಪ ಬನ್ನಿಗೋಳ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪಂಪಯ್ಯ ಮಠ, ಜಿಲ್ಲಾ ಸಮಿತಿ ಸದಸ್ಯ ಅನಂತರಾವ ದೇಶಪಾಂಡೆ, ಪತ್ರಕರ್ತರಾದ ರಾಘವೇಂದ್ರ ಗುಮಾಸ್ತೆ, ದೇವಪ್ಪ ರಾಠೋಡ, ಶಿವರಾಜ ಸುಂಕದ್, ಚಂದ್ರಣ್ಣ ಗಂಗಾವತಿ ಮುಂತಾದವರು ಪಾಲ್ಗೊಂಡಿದ್ದರು, ಓಕಳಿ ಇದ್ದುದರಿಂದ ಪಿಎಸ್ಐ ಬಸವರಾಜ ಬಿಸನಕೋಪ್ಪ ಮತ್ತು ಜಿಲ್ಲಾ ಹೆಚ್ಚುವರಿ ಪೊಲೀಸ್ ತುಕಡಿ ಗಸ್ತು ತಿರುಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement