ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಖಾತ್ರಿ'ಗೆ ಯಂತ್ರ ಬಳಕೆ; ಆಕ್ರೋಶ

Rashmi Kasaragodu
Updated On : 30 Mar 2013, 12:35 pm

ಕನ್ನಡಪ್ರಭ ವಾರ್ತೆ   ಮುದಗಲ್   ಮಾ.29
ಸಮೀಪದ ಮಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಗಲಕೋಟೆ ಮುಖ್ಯ ರಸ್ತೆಯಿಂದ ಗಡ್ಡಿಹಳ್ಳದವರೆಗೆ ರಸ್ತೆ ದುರಸ್ತಿಯನ್ನು ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗೆ ಯಂತ್ರ ಬಳಕೆ ಮಾಡಿದ್ದರಿಂದ ಕೂಲಿ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಜರುಗಿತು.
ಪ್ರಸಕ್ತ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 1 ಲಕ್ಷ ವೆಚ್ಚದಲ್ಲಿ ಜೆಸಿಬಿ ಯಂತ್ರದ ಮೂಲಕ ರಸ್ತೆ ಕಾಮಗಾರಿ ಮಾಡಿಸಿದ್ದರಿಂದ ನೂರಾರು ಕೂಲಿಕಾರರು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಬುದ್ದಿನ್ನಿ ಗ್ರಾಮದಲ್ಲಿ 102 ಕೂಲಿಕಾರರು ಹೆಸರು ನೋಂದಾಯಿಸಿದ್ದಾರೆ. 14 ದಿವಸ ಕೆಲಸ ಕೊಡುವುದಾಗಿ ಗ್ರಾಪಂ ಪಿಡಿಒ ಕೂಲಿಕಾರರಿಗೆ ಭರವಸೆ ನೀಡಿದ್ದರು. ಆದರೆ ಕೇವಲ ಒಂದು ವಾರ ಮಾತ್ರ ಕೆಲಸ ನೀಡಿ ಉಳಿದ ಹಣದಲ್ಲಿ ಯಂತ್ರದ ಮೂಲಕ ಕಾಮಗಾರಿ ಮಾಡಿಸಿದ್ದಾರೆ. ಕೂಲಿಕಾರರಿಗೆ ಕೆಲಸ ನೀಡದೆ ಗ್ರಾಪಂ ಅಧ್ಯಕ್ಷರ ಆಪ್ತರಿಗೆ ರಸ್ತೆ ದುರಸ್ತಿಗೆ ಯಂತ್ರ ಬಳಕೆ ಮಾಡಿರುವುದು ಅವ್ಯವಹಾರಕ್ಕೆ ಕಾರಣವಾಗಿದೆ.
ಆದ್ದರಿಂದ ಕಾಮಗಾರಿಯ ಬಿಲ್ ಪಾವತಿಸದಂತೆ ತಡೆಯಬೇಕೆಂದು ಜಿಲ್ಲಾಧಿಕಾರಿಗಳನ್ನು ಕೂಲಿಕಾರರಾದ ಗಂಗಮ್ಮ, ಹನುಮಮ್ಮ, ಬಾಳಮ್ಮ, ರುದ್ರಮ್ಮ ಹಾಗೂ ಗ್ರಾಮೀಣ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಬಿ.ಮಲ್ಲೇಶ ಒತ್ತಾಯಿಸಿದರು. ಒಂದು ವೇಳೆ ಬಿಲ್ ತಡೆಯದಿದ್ರೆ ತಾಲೂಕು ಪಂಚಾಯಿತಿ ಕಚೇರಿ ಎದುರು  ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement