ಶಿವಾನುಭವ ಕಮ್ಮಟ ಶಿಬಿರಕ್ಕೆ ಆಹ್ವಾನ
ಸಿಂಧನೂರು: ಬಸವ ಜಯಂತಿ ಶತಮಾನೋತ್ಸವ ಪ್ರಯುಕ್ತ ಬಸವ ಬಳಗದವರು ದಾವಣಗೆರೆಯಲ್ಲಿ ಏ.21ರಿಂದ 24ರ ವರೆಗೆ ಶಿವಾನುಭವ ಕಮ್ಮಟ ಶಿಬಿರ ಏರ್ಪಡಿಸಿದ್ದಾರೆ ಎಂದು ಬಸವಯೋಗ ಸಮಿತಿ ಗೌರವಾಧ್ಯಕ್ಷ ಶಿವಣ್ಣ ಹ. ಸಣ್ಣಪ್ಪನವರ್ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು ಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವವರು ತಮ್ಮ ಪೂರ್ಣ ಹೆಸರು, ವಯಸ್ಸು, ಶಿಕ್ಷಣ, ಫೋನ್ ನಂ. ವಿಳಾಸ ಇತ್ಯಾದಿ ಅಗತ್ಯ ಮಾಹಿತಿ ಒಳಗೊಂಡ ಅರ್ಜಿಯನ್ನು ಏ.5ರೊಳಗಾಗಿ ಕಾರ್ಯದರ್ಶಿಗಳು ಬಸವ ಬಳಗ, ಸರಸ್ವತಿ ನಗರ ದಾವಣಗೆರೆ- 577005, ವಿಳಾಸಕ್ಕೆ ಸಲ್ಲಿಸಬೇಕು. ಶಿಬಿರಾರ್ಥಿಗಳಿಗೆ ಉಚಿತ ಪ್ರಸಾದ ವ್ಯವಸ್ಥೆ ಇದ್ದು ಹೆಚ್ಚಿನ ಮಾಹಿತಿಗೆ ಮೊ. 99865 67516, 94483 82156 ಸಂಪರ್ಕಿಸಿರಿ ಕೋರಲಾಗಿದೆ.